ಬಾಗಲಕೋಟೆ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್ ನಿರಾಣಿ ಅವರು ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಇಂದು ಕಂದಾಯ ಸಚಿವ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯ ಕೈಗೊಂಡರು.
ಇದಕ್ಕೂ ಮುನ್ನ ಗ್ರಾಮವಸ್ತವ್ಯಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಬಾಗಲಕೋಟೆಯ ಗದ್ದಿನಕೆರೆ ಕ್ರಾಸ್ ನಿಂದ ನಿರಾಣಿಯವರು ಹಾಗೂ ಬಿಜೆಪಿ ಕಾರ್ಯಕರ್ತರು ಬೈಕ್ ಮತ್ತು ಎತ್ತಿನಗಾಡಿ ರ್ಯಾಲಿ ಮಾಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಕುಂಭ ಹೊತ್ತ ಮಹಿಳೆಯರು ಹಾಗೂ ಡೊಳ್ಳು ಕುಣಿತದ ಮೂಲಕ ಆರ್.ಅಶೋಕ್ ಅವರನ್ನು ಊರಿನ ಜನರು ಬರಮಾಡಿಕೊಂಡರು.