ಡಾ.ಸಂಜೀವ ದಂಡಕೇರಿ ಯವರ ಬೊಳ್ಳಿ ದೋಟ ಚಿತ್ರದ ಸೂಪರ್ ಹಿಟ್ ಸಾಂಗ್ ..’ದಾನೆ ಪೊಣ್ಣೆ ನಿನ್ನ ಮನಸ್ ಎಂಕ್ ತೆರಿಯಂದೇ ಪೊವಾ…ಆಸೆ ದೀದ್ ಈ ಕಾಪುವ ಸಿಂಗಾರ ಪೂವಾ.’ ಈ ಹಾಡನ್ನು ಬಹುನಿರೀಕ್ಷಿತ ತುಳು ಚಿತ್ರ ಕ್ರಿಯೆಟಿವ್ ಡೈರೆಕ್ಟರ್ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ‘ಭೋಜರಾಜ್ MBBS’.ಚಿತ್ರದಲ್ಲಿ ಥಳುಕುಹಾಕಿಕೊಂಡಿದೆ.
ಈ ಹಾಡಿಗೆ ಅದೇ ಹಳೆಯ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ ಭೋಜರಾಜ್ ವಾಮಂಜೂರು ಮತ್ತು ನಾಯಕಿ ನವ್ಯ ಪೂಜಾರಿ. ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು ಈಗಾಗಲೇ ಹಲವಾರು ನಿರೀಕ್ಷೆಗಳೊಂದಿಗೆ ತುಳುವರು ಎದುರು ನೋಡುತ್ತಿರುವ ಈ ಚಿತ್ರದ ಮೂಲಕ ತುಳು ಚಲನಚಿತ್ರ ಹಾಗೂ ರಂಗಭೂಮಿಯ ದಿಗ್ಗಜರುಗಳಾದ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮೊದಲ ಬಾರಿಗೆ ಮೂರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಇತರ ತಾರಗಣದಲ್ಲಿ ಶೀತಲ್ ನಾಯಕ್, ನವ್ಯ ಪೂಜಾರಿ, ಸಾಯಿಕ್ರಷ್ಣ ಕುಡ್ಲ, ಉಮೇಶ್ ಮಿಜಾರ್, ರವಿ ರಾಮಕುಂಜ, ರೋನ್ಸ್ ಲಂಡನ್, ಪರ್ವೇಜ್ ಬೆಳ್ಳಾರೆ, ಪ್ರಾಣ್ ಶೆಟ್ಟಿ, ಮಾ.ದನವೀತ್ ಸುವರ್ಣ, ಸುಜಾತ ಶಕ್ತಿನಗರ, ನಮಿತಾ ಕುಲಾಲ್ ಮೊದಲಾದವರಿದ್ದಾರೆ.
ಚಿತ್ರಕ್ಕೆ ಸಂಗೀತ ನಿರ್ದೇಶನ ಗುರು ಬಾಯಾರು, ರಾಜೇಶ್ ಭಟ್ ಬೆದ್ರ , ಸಾಹಿತ್ಯ ಸುರೇಶ್ ಆರ್,ಎಸ್, ಕಾವೀ ಕೃಷ್ಣದಾಸ್, ದಿ. ಸೀತಾರಾಮ್ ಕುಲಾಲ್. ಹಿನ್ನೆಲೆ ಗಾಯನ ದೇವದಾಸ್ ಕಾಪಿಕಾಡ್, ಜಗದೀಶ್ ಆಚಾರ್ಯ ಪುತ್ತೂರು, ವಿದ್ಯಾಶ್ರೀ ಸುವರ್ಣ ಮೊದಲಾದವರ ಸಹಭಾಗಿತ್ವ ಇದೆ. ಇದೇ ವರ್ಷದಲ್ಲಿ ತೆರೆಗೆ ತರಲು ಚಿತ್ರ ತಂಡ ಯೋಜನೆ ಹಾಕಿದೆಯಂತೆ.