ಬೆಂಗಳೂರು : ಇಲ್ಲಿನ ಜನ್ಮಭೂಮಿ ಫೌಂಡೇಶನ್ ರಿ ಇವರ ವತಿಯಿಂದ ಕೊರೋನಾ ವಾರಿಯರ್ಸ್ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಚೆಫ್ ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪ್ರೈ ಲಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ನಮ್ಮ ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಅವರಿಗೆ ಭಾರತ ಗೌರವ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸಮಾರಂಭದಲ್ಲಿ ನಾಡಿನ ಖ್ಯಾತ ಸಾಹಿತಿ ಡಾ. ಕುಂ ವೀರಭದ್ರಪ್ಪ , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್, ಎಸ್ ಹೊಸಮನಿ, ಸಿಸಿಬಿ ಎಸಿಪಿ ಹೆಚ್.ಎಸ್.ಪರಮೇಶ್ವರ್, ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಪ್ಪ, ನಟಿ ಪೂಜಾ ರಮೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ.. ಜನಪ್ರತಿನಿಧಿಗಳನ್ನೂ ನಾಚಿಸಿದ ಸೇವೆ.. ಕಡಲತಡಿಯಲ್ಲಿ ‘ಗೋವಿಂದ’ನದ್ದೇ ಗುಣಗಾನ..
ಬೆಂಗಳೂರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ಡಾ ಶಿವಕುಮಾರ ನಾಗರ ನವಿಲೆ, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ರಘು ಗಂಗೂರು, ಮಾರುತಿ ಬಡಿಗೇರ ಸಮಾರಂಭದಲ್ಲಿ ಭಾಗವಹಿಸಿದ್ದರು.