ದೆಹಲಿ: ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರದಿಂದಲೇ ಇರಬೇಕು. ಹಣ ಪಾವತಿಯ ಹೆಸರಲ್ಲಿ ಸಂಪರ್ಕಿಸಲೆತ್ನಿಸುವ ಕಿಡಿಗೇಡಿಗಳು ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕುವ ಸಾಧ್ಯತೆಗಳಿವೆ. ಇಂಥದ್ದೊಂದು ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಏನಿದು ಆತಂಕ.?
ದೇಶಾದ್ಯಂತ ಟ್ರೋಜನ್ ಮಾಲ್ವೇರ್ ತಲ್ಲಣ ಸೃಷ್ಟಿಸಿದೆ. ಆಂಡ್ರಾಯ್ಡ್ ಫೋನ್‌ಗಳಿಗೆ ನಿಗೂಢ ಮಾಲ್ವೇರ್ ಲಗ್ಗೆ ಹಾಕಿ ಹಣ ಕಬಲಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ರೀ ಫಂಡ್ ಮಾಡಿಕೊಡುವ ಸಂದೇಶ ಮೂಲಕ ಈ ಮಾಲ್‌ವೇರ್ ಟೀಮ್ ಕೆಲಸ ಮಾಡುತ್ತಿವೆ. ಬ್ಯಾಂಕ್ ಗ್ರಾಹಕರ ಮೊಬೈಲ್‌ಗಳೇ ಈ ಮಾಲ್‌ವೇರ್‌ಗಳ ಟಾರ್ಗೆಟ್. ಮೊಬೈಲ್‌ಗೆ ಬರುವ ಸಂದೇಶವನ್ನು ಕ್ಲಿಕ್ ಮಾಡಿದರೆ ಬ್ಯಾಕ್ ಖಾತೆಯಲ್ಲಿನ ಹಣ ಲೂಟಿಯಾಗುವ ಆತಂಕವೂ ಇದೆ.
ಈಗಾಗಲೇ ಸುಮಾರು 27 ಬ್ಯಾಂಕ್‌ಗಳ ಗ್ರಾಹಕರಿಗೆ ಈ ನಿಗೂಢ ಸಂದೇಶಗಳು ರವಾನೆಯಾಗಿವೆ ಎಂದು Indian Computer Emergency Response Team ಹೇಳಿದೆ.
ಈ ಮಾಲ್‌ವೇರ್‌ಗೆ ಡ್ರಿನಿಕ್ ಎಂದು ಹೆಸರಿಸಲಾಗಿದ್ದು, ಇದನ್ನು ಹೊತ್ತು ಬರುವ ಸಂದೇಶದಲ್ಲಿನ ಲಿಂಕ್ ಒತ್ತಿದರೆ ಮೊಬೈಲ್‌ನಲ್ಲಿನ ಖಾಸಗಿ ಮಾಹಿತಿಗೂ ಧಕ್ಕೆಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.