ಬೆಳಗಾವಿ: ಕಾರು ಮತ್ತು ಬಸ್ ನಡುವೆ ಪರಸ್ಪರ
ಮುಖಾಮುಖಿ ಡಿಕ್ಕಿಯಾಗಿದ್ದ ವೇಳೆ ಗಾಯಾಳುಗಳನೆ ರವಿಗೆ ಧಾವಿಸುವ ಮೂಲಕ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ್ ಆರ್.ನಿರಾಣಿ ಅವರು
ಮಾನವೀಯತೆ ಮೆರೆದಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಗೆ ತೆರಳುತ್ತಿದ್ದ ಸಚಿವ ನಿರಾಣಿ, ಬೆಳಗಾವಿ ರಸ್ತೆ ಮಾರ್ಗವಾಗಿ ಮುಧೋಳ ಕ್ರಮಿಸುತ್ತಿದ್ದಾಗ ಭಿಕರ ಅಪಘಾತವನ್ನು ಸಾಕ್ಷೀಕರಿಸಿದರು. ನೇಸರ್ಗಿ ಸಮೀಪ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದರು.
ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಚಿವ ಮುರುಗೇಶ್ ನಿರಾಣಿ ಅವರು ತಕ್ಷಣವೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸಿದರು. ಅಪಘಾತಕ್ಕೀಡಾದ ವಾಹನಗಳಲ್ಲಿದ್ದವರ ಆತಂಕವನ್ನು ಗಮನಿಸಿದ ಸಚಿವರು, ಅವರ ನೆರವಿಗೆ ಧಾವಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡು ಖುದ್ದು ಅಂಬುಲೆನ್ಸ್ ಬರುವ ವ್ಯವಸ್ಥೆ ಮಾಡಿ ಮಾನವೀಯತೆಯನ್ನು ತೋರಿದರು.