ಬೆಳಗಾವಿ: ಕುಂದಾನಗರಿಯಲ್ಲಿಂದು ರಾಜ್ಯ ರಾಜಕಾರಣದ ಸಿಡಿ ವಿವಾದದ ಪ್ರತಿಧ್ವನಿ ಕೋಲಾಹಲದ ಸನ್ನಿವೇಶಕ್ಕೆ ಕಾರಣವಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪು ಪ್ರತಿಭಟನೆ ನಡೆಸಿತು.
ಸಿಡಿ ವಿವಾದ ಕುರಿತಂತೆ ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಅವರು ಡಿಕೆಶಿ ವಿರುದ್ದ ಆಕ್ರೋಶ ಹೊರಹಾಕಿದ್ದರು. ಇಂದು ಡಿಕೆಶಿ ಬೆಳಗಾವಿಗೆ ಭೇಟಿ ನೀಡಿದ ವೇಳೆ, ಸಾಂಬ್ರಾ ವಿಮಾನ ನಿಲ್ದಾಣ ಸಮೀಪ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಡಿಕೆಶಿಯವರು ಹೋಟೆಲ್ ಗೆ ತೆರಳುತ್ತಿದ್ದ ವೇಳೆ ಪ್ರತಿಭಟನಾಕಾರರು ಕೈ ನಾಯಕ ಪ್ರಯಾಣಿಸುತ್ತಿದ್ದ ಕಾರನ್ನು ತಡೆದರು. ಡಿಕೆಶಿ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದರು.
ಈ ಸಂದರ್ಭದಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಉದ್ರಿಕ್ತರ ಪೈಕಿ ಹಲವರು ಖಾಕಿ ಲಾಠಿಯ ಏಟಿನ ರುಚಿ ಅನುಭವಿಸುವಂತಾಯಿತು.