ಗದಗ್: ಯಡಿಯೂರಪ್ಪ ನಾಯಕತ್ವದಲ್ಲಿ ಸರಕಾರ ನಡೆಯುತ್ತಿದೆ. ಮುಂದಿನ ಎರಡು ವರ್ಷ ಅವರ ನೇತೃತ್ವದಲ್ಲೇ ಸರಕಾರ ನಡೆಯುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ರಾಜೀನಾಮೆ ಹೇಳಿಕೆ ಕುರಿತ ಸುದ್ದಿ ಬಗ್ಗೆ ಗದಗ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪನವರ ಮೇಲೆ ಹೈಕಮಾಂಡ್ ಆಶಿರ್ವಾದ ಇದೆ. ಆದರೆ ಸಹಿ ಸಂಗ್ರಹ ಕುರಿತು ನನಗೆ ಮಾಹಿತಿ ಇಲ್ಲ.ರೇಣುಕಾಚಾರ್ಯ ಏನು ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ. ನಾನು ಜಿಲ್ಲಾ ಮಟ್ಟದ ಪ್ರವಾಸದಲ್ಲಿದ್ದೇನೆ.ಯಾರು ಏನು ಮಾಡುತ್ತಾರೋ ಅವೆಲ್ಲದಕ್ಕೂ ನಾನು ಉತ್ತರ ಕೊಡಲು ಸಿದ್ಧವಿಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಪರ್ಯಾಯ ನಾಯಕತ್ವದ ಬಗ್ಗೆ ಯಡಿಯೂರಪ್ಪ ಮಾತನಾಡಿಲ್ಲ.ಆದರೆ ಎಲ್ಲ ಕಡೆ ಪರ್ಯಾಯ ನಾಯಕರು ಇರ್ತಾರೆ ಅಂತ ಹೇಳಿದ್ದಾರೆ.
ಅವರು ಇರಬೇಕಾದ್ರೆ ಪರ್ಯಾಯ ನಾಯಕತ್ವ ಮತ್ತು ಬೇರೆಯವರ ಹೆಸರುಗಳ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.