ಮಂಗಳೂರು: ಬಂಟ್ವಾಳ ಸಮೀಪ ಖಾಸಗಿ ಬಸ್ಸು ಮಗುಚಿಬಿದ್ದು ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿದ್ದಾರೆ.
ಬಿ.ಸಿ.ರೋಡಿನಿಂದ ಪೊಳಲಿ ಮಾರ್ಗವಾಗಿ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸು ರವಿವಾರ ಕಮ್ಮಾಜೆ ಬಳಿ ಪಲ್ಟಿಯಾಗಿದೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಅಪಘಾತವಾಗಿದ್ದು, ಚಾಲಕ ಮತ್ತು ನಿರ್ವಾಹಕನಿಗೆ ಗಾಯಗಳಾಗಿವೆ. ಭಾನುವಾರ ಬೆಳಿಗ್ಗಿನ ಹೊತ್ತು ಪ್ರಯಾಣಿಕರು ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.