ಮಂಗಳೂರು: ಕರಾವಳಿಯಲಿ ಕೀಚಕ ಪಡೆಯೊಂದು ಅಟ್ಟಹಾಸ ಮೆರೆದಿದೆ ಎಂಬ ಆರೋಪ ಕೇಳಿಬಂದಿದೆ. ಬಂಟ್ವಾಳ ಸಮೀಪ ಅಪ್ರಾಪ್ತೆಯನ್ನು ಅಪಹರಿಸಿರುವ ಮರ್ಕಟ ಮನಸ್ಸಿನ ಯುವಕರ ತಂಡ ಗ್ಯಾಂಗ್ ರೇಪ್ ನಡೆಸಿದೆ ಎಂಬ ಸುದ್ದಿ ಆತಂಕದ ಅಲೆಯನ್ನೇ ಎಬ್ಬಿಸಿದೆ.
ಬಂಟ್ವಾಳ ಠಾಣಾ ವ್ಯಾಪ್ತಿಯ ಅಮ್ಟಾಡಿ ಬಳಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಅಪ್ರಾಪ್ತೆಯನ್ನು ಐವರು ಅಪಹರಿಸಿ ಮತ್ತು ಭರಿಸುವವ ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೃತ್ಯ ಯಾವಾಗ ನಡೆದಿದೆ ಎಂಬ ಬಗ್ಗೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಂತ್ರಸ್ತೆಯ ಪರಿಚಿತರಿಂದಲೇ ಈ ಕೃತ್ಯ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.