ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಜನಪ್ರಿಯ ಜಾನಪದ ಕ್ರೀಡೆ. ಈ ಕ್ರೀಡೆಯು ವರ್ಣಿಸಲಾಗದ ಸೊಗಸು ಹಾಗೂ ಸೊಬಗು. ಈ ಸೊಗಸಾದ ಕಂಬಳೋತ್ಸವ ಬಂಟ್ವಾಳ ಸಮೀಪದ ಕಕ್ಯಪದವಿನಲ್ಲಿ ನಡೆಯಿತು. ‘ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳದ ಅನನ್ಯ ಸನ್ನಿವೇಶ ನಾಡಿನ ಗಮನ ಸೆಳೆಯಿತು.
ಕಕ್ಯಪದವಿನಲ್ಲಿ ನಡೆದ 8ನೇ ವರ್ಷದ ಕಂಬಳೋತ್ಸವ ಇದಾಗಿದ್ದು, ಸುಮಾರು 155 ಜತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 2 ಜತೆ, ಅಡ್ಡಹಲಗೆ ವಿಭಾಗದಲ್ಲಿ 5 ಜತೆ, ಹಗ್ಗ ಹಿರಿಯ ವಿಭಾಗದಲ್ಲಿ 12 ಜೋಡಿ, ನೇಗಿಲು ಹಿರಿಯ ವಿಭಾಗದಲ್ಲಿ 21 ಜತೆ, ಹಗ್ಗ ಕಿರಿಯ ವಿಭಾಗದಲ್ಲಿ 18 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ 97 ಕೋಣಗಳು ಭಾಗಿಯಾಗಿದ್ದವು.
ಪ್ರಶಸ್ತಿ ಗೆದ್ದ ಕೋಣಗಳು;
ಕನೆಹಲಗೆ ವಿಭಾಗ:
- ಕೋಟ ಪಡುಕೆರೆ ಶೀನ ಪೂಜಾರಿ
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್ ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಅಡ್ಡ ಹಲಗೆ ವಿಭಾಗ:
- ಪ್ರಥಮ: ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ಡಾನ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
- ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ, ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ
ಹಗ್ಗ ಹಿರಿಯ ವಿಭಾಗ:
- ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ - ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಬಿ”
ಓಡಿಸಿದವರು: ಮಾರ್ನಾಡ್ ರಾಜೇಶ್.
ಹಗ್ಗ ಕಿರಿಯ ವಿಭಾಗ:
- ಪ್ರಥಮ: ಮೂಡಬಿದ್ರಿ ನ್ಯೂ ಪಡಿವಾಳ್ಸ್ ಹಾರ್ಧಿಕ್ ಹರ್ಷವರ್ಧನ ಪಡಿವಾಳ್, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
- ದ್ವಿತೀಯ: ಸರಪಾಡಿ ಮಿಯಾರು ಸುರೇಶ್ ಶೆಟ್ಟಿ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ
ನೇಗಿಲು ಹಿರಿಯ ವಿಭಾಗ:
- ಪ್ರಥಮ: ಪಡ್ಡಾಯೂರುಗುತ್ತು ಮಿಹಿರ್ ಸತ್ಯನಾರಾಯಣ ಶೆಟ್ಟಿ, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
- ದ್ವಿತೀಯ: ಸರಪಾಡಿ ಕೆಳಗಿನಬಳ್ಳಿ ಲಿಯೋ ಫೆರ್ನಾಂಡಿಸ್, ಓಡಿಸಿದವರು: ನಕ್ರೆ ಗಿರೀಶ್
ನೇಗಿಲು ಕಿರಿಯ ವಿಭಾಗ:
- ಪ್ರಥಮ: ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ
- ದ್ವಿತೀಯ: ಮೂಡಬಿದ್ರಿ ನ್ಯೂ ಪಡಿವಾಳ್ಸ್ ಶೃತಿ ಹಾರ್ಧಿಕ್ ಪಡಿವಾಳ್, ಓಡಿಸಿದವರು: ಪೆರಿಂಜೆ ಪ್ರಮೋದ್ ಕೋಟ್ಯಾನ್.