ಬೆಂಗಳೂರು: ನಾಡಿನ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರ ಪಾಂಡಿತ್ಯ ಎಲ್ಲರಿಗೂ ಮಾರಗಗದರ್ಶಿ. ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ವಲಯದಲ್ಲಿ ರಾಯಭಾರಿಯೆಂಬಂತೆ ಗುರುತಾಗಿದ್ದರು ಎಂದು ಲಂಡನ್ ಮಾಜಿ ಮೇಯರ್ ನೀರಜ್ ಪಾಟೇಲ್ ಹೇಳಿದ್ದಾರೆ.
ಹಿರಿಯ ವಿದ್ವಾಂಸ, ಬನ್ನಂಜೆ ಗೋವಿಂದಾಚಾರ್ಯರು ವಿಧಿವಶರಾದ ಸುದ್ದಿ ತಿಳಿದು ತುಂಬಾ ದಃಖಿತನಾಗಿದ್ದೇನೆ ಎಂದಿರುವ ಅವರು, ‘ಮಾಧ್ವ ತತ್ವದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಬನ್ನಂಜೆ ಗೋವಿಂದಾಚಾರ್ಯರನ್ನು ನಾನು ತುಂಬಾ ಹತ್ತಿರದಿಂದ ಕಂಡವನು. ನಾನು ಬಾಲ್ಯದಲ್ಲಿ ಕಲಬುರಗಿಯಲ್ಲಿದ್ದಾಗ ಗೋವಿಂದಾಚಾರ್ಯರ ಮಹಾಭಾರತದಂತಹಾ ಪ್ರವಚನಗಳನ್ನು ಕೇಳುತ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ’ ಎಂದು ನೀರಜ್ ಪಾಟೇಲ್ ಹೇಳಿದ್ದಾರೆ.
ಪ್ರವಚನದ ಮೂಲಕ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದ ಬನ್ನಂಜೆಯವರು ಹಲವರಿಗೆ ಸ್ಫೂರ್ತಿಯಾಗಿದ್ದರು. ಇದೀಗ ಅವರನ್ನು ಕಳೆದುಕೊಂಡಿದ್ದೇವೆ ಲಂಡನ್ ಮಾಜಿ ಮೇಯರ್ ನೀರಜ್ ಪಾಟೇಲ್ ಶೋಕ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.