ಬೆಂಗಳೂರಿನ ಯುನೈಟೆಡ್ ಹಾಸ್ಪಿಟಲ್ ನಲ್ಲಿ ಸ್ಪುಟ್ನಿಕ್-ವಿ ಲಸಿಕೆ ಲಭ್ಯ.. ರಾಜ್ಯದ ಮೊದಲ ಸ್ಪುಟ್ನಿಕ್-ವಿ ಲಸಿಕಾಕರಣ ಅಭಿಯಾನ..
ವಾಟ್ಸಾಪ್ ಮೂಲಕ ಸುಲಭವಾಗಿ ಸ್ಲಾಟ್ ಬುಕ್ ಮಾಡುವ ಸೌಲಭ್ಯ.. ವಾಟ್ಸಾಪ್ ನಂ: 9916977777..
ಬೆಂಗಳೂರು:: ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಜಯನಗರದ ಯುನೈಟೆಡ್ ಆಸ್ಪತ್ರೆಗೆ ಸ್ಪುಟ್ನಿಕ್-ವಿ ಲಸಿಕೆ ಸರಬರಾಜಾಗಿದ್ದು ಇಂದಿನಿಂದಲೇ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಕರೋನಾ ಸಾಂಕ್ರಾಮಿಕದ ವಿರುದ್ದ ವಿಶ್ವದ ಮೊದಲ ಲಸಿಕೆಯಾಗಿರುವ ಸ್ಪುಟ್ನಿಕ್-ವಿ ಯ ರಾಜ್ಯದ ಮೊದಲ ಲಸಿಕಾ ಅಭಿಯಾನ ಇದಾಗಿದ್ದು ಯುನೈಟೆಡ್ ಆಸ್ಪತ್ರೆಗೆ ಈಗಾಗಲೇ ಸಾಕಷ್ಟು ಡೋಸ್ ಗಳಷ್ಟು ಲಸಿಕೆ ಸರಬರಾಜಾಗಿದೆ. ಪ್ರತಿವಾರ ನಮ್ಮ ಅಗತ್ಯತೆಗೆ ತಕ್ಕಂತೆ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ರೆಡ್ಡಿ ಲ್ಯಾಬೋರೇಟರಿ ನೀಡಿದೆ. ಈ ಲಸಿಕೆಯ ಸ್ಟೋರೇಜ್ ಗೆ ಅಗತ್ಯವಿರುವ ಅತ್ಯಾಧುನಿಕ ಫ್ರೀಜರ್‌ಗಳನ್ನು ಇಲ್ಲಿ ಅಳವಡಿಸಿಲಾಗಿದ್ದು, ಮೈನಸ್ -30 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಾಂಶದಲ್ಲಿ ಲಸಿಕೆಗಳನ್ನು ಸಂಗ್ರಹಿಸಲಾಗಿದೆ. ಯುನೈಟೆಡ್ ಬ್ರದರ್ಸ್ ಹೆಲ್ತಕೇರ್ ಸರ್ವೀಸಸ್ ಪ್ರೈ ಲಿಮಿಟೆಡ್ ನ ನೂತನ ಆಸ್ಪತ್ರೆಯಾಗಿರುವ ಜಯನಗರ ಯುನೈಟೆಡ್ ಆಸ್ಪತ್ರೆ ಉದ್ಘಾಟನೆಗೆ ಸಿದ್ದವಾಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳು ಹಾಗೂ ಮಾನವ ಸಂಪನ್ಮೂಲ ಹೊಂದಿದೆ. ಕರೋನಾ ಸಾಂಕ್ರಾಮಿಕದ ವಿರುದ್ದ ಹೋರಾಡಲು ಲಸಿಕಾರಣ ಅಭಿಯಾನ ಪ್ರಮುಖವಾದ ಅಸ್ತವಾಗಿದೆ. ಈ ಹಿನ್ನಲೆಯಲ್ಲಿ ಉದ್ಘಾಟನೆಗೂ ಮುನ್ನವೇ ನಾಲ್ಕು ಅಂತಸ್ತಿನ ಕಟ್ಟಡವನ್ನು ಹಾಗೂ ನಮ್ಮ ಎಲ್ಲಾ ಅತ್ಯಾಧುನಿಕ ಗುಣಮಟ್ಟದ ಸೇವೆಗಳನ್ನು ಕೇವಲ ಲಸಿಕೆ ನೀಡುವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ (ಎರಡು ವಾರಗಳ ಕಾಲ) ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಯುನೈಟೆಡ್ ಆಸ್ಪತ್ರೆ ಜಯನಗರ, ಅತ್ಯಾಧುನಿಕ ಆಪರೇಷನ್ ಥಿಯೇಟರ್, ಐ.ಸಿ.ಯು ಸೌಲಭ್ಯ, ಡಯಾಗ್ನೋಸ್ಟಿಕ್ಸ್ ಹಾಗೂ ವೆಲ್‌ನೆಸ್ ಸೌಲಭ್ಯ ಹೊಂದಿರುವ ನವನಿರ್ಮಿತ ಆಸ್ಪತ್ರೆಯಾಗಿದೆ. ಶೀಘ್ರದಲ್ಲೇ ಇದರ ಉದ್ಘಾಟನೆಯ ಬಗ್ಗೆ ವಿಸ್ತ್ರುತ ಮಾಹಿತಿ ಮಾಹಿತಿಗಳನ್ನು ನೀಡಲಾಗುವುದು ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್ ಸಿದ್ದಾರೆಡ್ಡಿ ಹೇಳಿದ್ದಾರೆ.
ಈ ಕುರಿತಂತೆ ಮತ್ತಷ್ಟು ಮಾಹಿತಿ ಹಂಚಿಕೊಂಡಿರುವ ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್ ಮುರುಡಾ, ಈ ಲಸಿಕೆಯನ್ನು ಅತ್ಯಂತ ಜತನದಿಂದ ಕಾಪಾಡಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ನಾವುಗಳು ದಿನದ ಎಲ್ಲಾ ಸಮಯದಲ್ಲೂ ಅತ್ಯಂತ ನಿಗಾ ಇಡುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇವೆ. ದೇಶದ ಯಾವುದೇ ಮೂಲೆಯಿಂದ ತಾಪಾಂಶದಲ್ಲಿ ಆಗುವ ಬದಲಾವಣೆಗಳನ್ನು ಮಾನಿಟರ್ ಮಾಡಬಹುದಾಗಿದೆ. ಹಾಗೂ ತುರ್ತು ಸಂಧರ್ಭದಲ್ಲಿ ಅಟೋಮ್ಯಾಟಿಕ್ ಆಗಿ ಎಸ್‌ಎಂಎಸ್ ಅಲರ್ಟ್ ಕಳುಹಿಸುವ ತಂತ್ರಜ್ಞಾನ ಇದಾಗಿದ್ದು, ತಕ್ಷಣ ನಮ್ಮ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಲಸಿಕೆಯನ್ನು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಫರ್ಕಿಸಬಹುದಾಗಿದೆ. ಅಲ್ಲದೆ, ವಾಟ್ಸಾಪ್ ನಲ್ಲಿ (ವಾಟ್ಸಾಪ್ ನಂ: 9916977777) ಅತ್ಯಂತ ಸುಲಭವಾಗಿ ಲಸಿಕೆ ಪಡೆದುಕೊಳ್ಳುವ ಸ್ಲಾಟ್ ಬುಕ್ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ.