ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಆರ್.ಶ್ರೀಧರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪ್ರೆಸ್‌ಕ್ಲಬ್‌ನ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ಆರ್ ಶ್ರೀಧರ್ ಅಧ್ಯಕ್ಷರಾಗಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಆನಂದ್ ಬೈದನಮನೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪಟ್ಟಿ ಹೀಗಿದೆ:
- ಅಧ್ಯಕ್ಷರು: ಆರ್. ಶ್ರೀಧರ್.
- ಉಪಾಧ್ಯಕ್ಷರು: ಆನಂದ್ ಬೈದನಮನೆ.
- ಪ್ರಧಾನ ಕಾರ್ಯದರ್ಶಿ: ಮಲ್ಲಪ್ಪ.
- ಕಾರ್ಯದರ್ಶಿ: ದೊಡ್ಡ ಬೊಮ್ಮಯ್ಯ.
- ಸಹಕಾರ್ಯದರ್ಶಿ- ಮಹಂತೇಶ್.
- ಖಜಾಂಚಿ: ಮೋಹನ್.
- ಕಾರ್ಯಕಾರಿಣಿ ಸದಸ್ಯರು: ಗಣೇಶ್, ಆಲ್ಫ್ರೆಡ್, ರೋಹಿಣಿ, ಮುನಿರಾಮೇಗೌಡ, ಯಾಸಿರ್, ಸೋಮಣ್ಣ. ಮಹಿಳಾ ಸದಸ್ಯರು- ಮಿನಿ ತೇಜಸ್ವಿ.
ಇದೇ ವೇಳೆ, ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ವಿಜಯಿಯಾಗಿರುವ ಪತ್ರಕರ್ತರನ್ನು ಸಚಿವ ಮುರುಗೇಶ್ ನಿರಾಣಿ ಅಭಿನಂಧಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮುಂದಿನ ದಿನಗಳಲ್ಲಿ ಪ್ರೆಸ್ ಕ್ಲಬ್ ಮತ್ತಷ್ಟು ಬೆಳೆಯಲಿದೆ ಎಂಬ ವಿಶ್ವಾಸವಿದೆ. ಈ ಮೂಲಕ ಮಾಧ್ಯಮ ಸ್ನೇಹಿತರಿಗೆ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಆಶಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ನನ್ನ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಪರಿಶ್ರಮದಿಂದ ಪ್ರೆಸ್ ಕ್ಲಬ್ ಮತ್ತಷ್ಟು ಬೆಳೆಯಲಿದೆ ಎಂಬ ವಿಶ್ವಾಸವಿದೆ. ಈ ಮೂಲಕ ಮಾಧ್ಯಮ ಸ್ನೇಹಿತರಿಗೆ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಆಶಿಸುತ್ತೇನೆ. pic.twitter.com/I2AqPy13kF
— Dr. Murugesh R Nirani (@NiraniMurugesh) June 12, 2022


























































