ಬೆಂಗಳೂರು: ರಾಜ್ಯ ಪೊಲೀಸರ ಪ್ರತಿ ನಡೆಯನ್ನು ಪ್ರಶ್ನೆ ಮಾಡುವ ಮುನ್ನ ನಮ್ಮ ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳೋಣ ಎಂಬ ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಉದಾಹರಣೆ ಎಂಬಂತಹಾ ಕಾರ್ಯಾಚರಣೆಗೆ ಬೆಂಗಳೂರು ಪೊಲೀಸರು ಸಾಕ್ಷಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ಚಾರಮರಾಜನಗರ ರೀತಿಯ ಭೀಕರ ದರಂತ ಸಂಭವಿಸಲು ಇನ್ನೇನು ಕೆಲವೇ ಹೊತ್ತು ಇರುವಾಗಲೇ ಮಹಿಳಾ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸ್ ತಂಡ ನಡೆಸಿದ ಸಿನಿಮೀಯ ರೀತಿಯ ಕಾರ್ಯಾಚರಣೆ ಆ ಅವಘಡವನ್ನು ತಪ್ಪಿಸಿದೆ. ಮೇ 12ರ ರಾತ್ರಿ ನಡೆದ ಈ ಘಟನೆ ಒಮ್ಮೆ ಜನರನ್ನು ಬೆಚ್ಚಿ ಬೀಳಿಸಿದೆಯಾದರೂ ಪೊಲೀಸರು ಕೈಗೊಂಡ ಕಾರ್ಯಾಚರಣೆ ರಾಜಧಾನಿ ಜನರನ್ನು ನಿರಾಳವಾಗಿಸಿತು.
ಮಧ್ಯರಾತ್ರಿ 12 ಗಂಟೆ ಕ್ರಮಿಸಿದ್ದು, ಜಗತ್ತು ನೀರವತೆಯ ನಿದ್ದೆಯಲ್ಲಿದ್ದಾಗಲೇ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳೀಯ ಶ್ರೇಯಸ್ ಆಸ್ಪತ್ರೆ ಭಯಾನಕ ಸನ್ನಿವೇಶ ಸೃಷ್ಟಿಯಾಯಿತು. ಕೊರೋನಾ ಸೋಂಕಿತರು ಸೇರಿದಂತೆ ಅನೇಕ ರೋಗಿಗಳು ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಯಿತು. ಈ ಅವಾಂತರದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸ್ಥಿತಿ ಅಯೋಮಯವೆನಿಸಿತು.
ಆ ಕೂಡಲೇ ಜೆ.ಸಿ.ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ಅವರಿಗೆ ಮಾಹಿತಿ ಸಿಕ್ಕಿದೆ. ಈ ಆಸ್ಪತ್ರೆ ಇದ್ದುದು ಬೇರೆಯೇ ಉಪವಿಭಾಗದಲ್ಲಾದರೂ ತಕ್ಷಣವೇ ಎಸಿಪಿ ರೀನಾ ಸುವರ್ಣ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಸ್ಥಳೀಯ ಇನ್‌ಸ್ಪೆಕ್ಟರ್ ಕಾಂತಾರಜ್ ಕೂಡಾ ಸ್ಥಳದಲ್ಲಿದ್ದುಕೊಂಡು ಕಾರ್ಯಾಚರಣೆಗಿಳಿದರು.
ಜೀವವಾಯು ಸೋರಿಕೆಯ ಆಪತ್ತನ್ನು ಚಾಲಾಕಿತನದಿಂದಲೇ ನಿಭಾಯಿಸಬೇಕಾದ ಸಂದಿಗ್ಧ ಸ್ಥಿತಿ ಅದಾಗಿತ್ತು. ಅಗ್ನಿಶಾಮಕ ದಳ ಸಹಿತ ತುರ್ತು ಸೇವಾ ತಂಡಗಳೂ ಸ್ಥಳಕ್ಕೆ ದೌಡಾಯಿಸಿತಾದರೂ ಅದಾಗಲೇ ಸುಮಾರು 20 ರೋಗಿಗಳು ಆಮ್ಲಜನಕ ಇಲ್ಲದೆ ನರಳಾಡುವ ದುಸ್ಥಿತಿ ಎದುರಾಯಿತು. ಅದಾಗಲೇ ಕ್ಷಿಪ್ರ ನಿರ್ಧಾರ ಕೈಗೊಂಡ ಎಸಿಪಿ ರೀನಾ ತಂಡ ಸೋನು ಸೂದ್ ಟ್ರಸ್ಟನ್ನು ಸಂಪರ್ಕಿಸಿ ನೆರವು ಕೋರಿತು. ಆದರೆ ಸೋನು ಸೂದ್ ತಂಡದವರು ದೂರದಿಂದ ಆಗಮಿಸುವಷ್ಟರಲ್ಲಿ ಅನಾಹುತ ಸಾದ್ಯತೆಯ ಬಗ್ಗೆ ಮನಗಂಡ ಖಾಕಿ ತಂಡ ಫೋರ್ಟಿಸ್, ರೈನ್‌ಬೋ ಆಸ್ಪತ್ರೆಗಳನ್ನೂ ಸಂಪರ್ಕಿಸಿ ಕಾರ್ಯಾಚರಣೆಗೆ ವೇಗ ನೀಡಿತು. ಸಿನಿಮೀಯ ರೀತಿಯಲ್ಲಿ ಅಖಾಡದಲ್ಲಿ ಶ್ರಮಿಸಿದ ಪೊಲೀಸರು ಸೂದ್ ತಂಡದವರನ್ನೂ ಕರೆಸಿಕೊಂಡಿದೆ. ಸುಮಾರು 6 ಜಂಬೋ ಸಿಲಿಂಡರನನ್ನೂ ಶ್ರೇಯಸ್ ಆಸ್ಪತ್ರೆಗೆ ತರಿಸಲಾಯಿತು. ತಾರಾತುರಿಯಲ್ಲೇ ವ್ಯವಸ್ಥೆ ಸಿದ್ಧಗೊಳಿಸಿ ಸುಮಾರು 20 ಮಂದಿಯ ಜೀವಗಳನ್ನು ಉಳಿಸಲಾಯಿತು.
ನಿಬ್ಬೆರಗಾದ ಜನ.. ನಿರಾಳರಾದ ವೈದ್ಯರು..
ಇಂತಹಾ ಸನ್ನಿವೇಶಗಳನ್ನು ಸಿನಿಮಾದಲ್ಲಿ ನಾವು ಕಂಡಿದ್ದೆವು. ಇದೀಗ ಪೊಲೀಸರು ನಮ್ಮ ಕಣ್ಣಮುಂದೆಯೇ ಸಿನಿಮಾವನ್ನು ಮೀರಿದ ರೋಚಕ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶ್ರೇಯಸ್ ಆಸ್ಪತ್ರೆ ಬಳಿ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. ಕ್ಷಿಪ್ರ ಪರ್ಯಾಯ ಆಕ್ಸಿಜನ್ ವ್ಯವಸ್ಥೆಯಿಂದ ಆಸ್ಪತ್ರೆ ವೈದ್ಯರೂ ನಿರಾಳರಾದರು.
At my night rounds Yest day , got info about the oxygen cylinder leak at Shreya hospital. Got to witness how The Sonu Sood foundation works at God’s speed. In two mins Hoysala reached Fire service, PI Kantha raj Mahalakshmi lyt PS arranged alternate cylinders.
— ACP J C NAGAR (@acpjcnagar) May 13, 2021
ಈ ನಡುವೆ ತಮ್ಮ ಸಲಹೆಯಂತೆ ಸ್ಥಳಕ್ಕೆ ತುರ್ತಾಗಿ ಧಾವಿಸಿ ಸಕಾಲದಲ್ಲೇ ಸ್ಪಂಧಿಸಿದ ಸೋನು ಸೂದ್ ಟ್ರಸ್ಟ್ ಕಾರ್ಯಕರ್ತರಿಗೆ ಎಸಿಪಿ ರೀನಾ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ. ರೋಚಕತೆಯ ಸನ್ನಿವೇಶದಲ್ಲಿ ಶ್ರಮಿಸಿದ ಸಹೋದ್ಯೋಗಿಗಳ ಕೆಲಸದ ಬಗ್ಗೆಯೂ ಅವರು ಹೆಮ್ಮೆಪಟ್ಟಿದ್ದಾರೆ.
also arranged at Fortis.All this in 30 mins.Timely action saved 19 ppl who were on oxygen.Thanks to My Police Men. The Sonu Sood foundation,Youth Rolemodel Dr Samith of Shreya Hospital and Arun PRO of Rainbow hospital.The other side of Policing. Humanity Triumphs.@SoodFoundation pic.twitter.com/Jlj8P4x9yU
— ACP J C NAGAR (@acpjcnagar) May 13, 2021
ಈ ಮಧ್ಯೆ, ಚಾಮರಾಜನಗರ ರೀತಿಯ ಭಾಯಾನಕ ದುರಂತವನ್ನು ಎಸಿಪಿ ರೀನಾ ಸುವರ್ಣ ಹಾಗೂ ಇನ್‌ಸ್ಪೆಕ್ಟರ್ ಕಾಂತರಾಜು ನೇತೃತ್ವದ ಪೊಲೀಸರು ತಪ್ಪಿಸಿದ್ದಾರೆ ಎಂದು ಶ್ರೇಯಸ್ ಆಸ್ಪತ್ರೆ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಈ ಕಾರ್ಯಾಚರಣೆಯ ಸಾರಥ್ಯ ವಹಿಸಿರುವ ರೀನಾ ಸುವರ್ಣ ಅವರಿಗೆ ಆಸ್ಪತ್ರೆ ಸಿಬ್ಬಂದಿ ಕೃತಜ್ಞತೆ ಸಮರ್ಪಿಸಿದೆ.