ಅಯೋಧ್ಯೆ: ಮಂದಿರಲ್ಲೇ ಕಟ್ಟುವೆವು ಎಂಬ ದಶಕಗಳ ಘೋಷಣೆ ಇದೀಗ ಸಾಕಾರಗೊಂಡಿದೆ, ಸುಮಾರು 5 ಶತಮಾನಗಳ ಹೋರಾಟ ಇದೀಗ ಅಂತ್ಯಗೊಂಡಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ಇದೀಗ ಭಕ್ತಿ ಕೈಕಾರ್ಯಕ್ಕೆ ಮುಕ್ತವಾಗಿದೆ.
ವೈಭವೋಪೇತ ಕಾರ್ಯಕ್ರಮಗಳೊಂದಿಗೆ, ಅಸಂಖ್ಯ ಯತಿಗಳು ಸಾಕ್ಷಿಯಾಗಿ ಇಂದು ಮಧ್ಯಾಹ್ನ ಅಭಿಜಿತ್ ಲಗ್ನದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರಿದೆ. ಇಡೀ ಜಗತ್ತು, ಸಮಸ್ತ ಆಸ್ತಿಕ ಸಮುದಾಯ ಈ ಕ್ಷಣಕ್ಕಾಗಿ ಬಹು ಕಾಲದಿಂದ ಕಾದು ಕುಳಿತಿತ್ತು.
ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು, ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಗಮನಸೆಳೆದರು. ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರಿವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿ, ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್, ಪೇಜಾವರ ಶ್ರೀ ಉಪಸ್ಥಿತಿಯಲ್ಲಿ ಗರ್ಭಗುಡಿಯಲ್ಲಿ ನೆರವೇರಿದ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯದಲ್ಲೂ ಮೋದಿ ಭಾಗಿಯಾದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
स्वर्ग सा सजा अयोध्या धाम,
बस कुछ पलों में विराजेंगे प्रभु श्रीराम।जय श्री राम 🚩🙏❤️#RamMandirPranPrathistha #JaiShreeRam #राम_का_भव्य_धाम #विराजो_राम_अयोध्या_धाम #Ayodhya #AyodhyaRamMandir #JaiShriRam pic.twitter.com/Uf1tpuZV54
— Mahant Adityanath 2.0🦁 (@MahantYogiG) January 22, 2024
ಚಿತ್ರ ತಾರೆಯರಾದ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ರಿಷಬ್ ಶೆಟ್ಟಿ, ಸೋನು ನಿಗಮ್, ತೆಲುಗು ನಟ ಚಿರಂಜೀವಿ, ರಾಮ್ ಚರಣ್ ತೇಜ್ ಸಹಿತ ಅನೇಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹಿತ ರಾಜಕೀಯ ನಾಯಕರು, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹಿತ ಕ್ರೀಡಾ ಕ್ಷೇತ್ರದ ಪ್ರಮುಖರು, ಮುಕೇಶ್ ಅಂಬಾನಿ ಸಹಿತ ಉದ್ಯಮ ಕ್ಷೇತ್ರದ ದಿಗ್ಗಜರು ಸೇರಿದಂತೆ 7 ಸಾವಿರಕ್ಕೂ ಅಧಿಕ ಗಣ್ಯರು ಈ ಚಾರಿತ್ರಿಕ ಸಮಾರಂಭದಲ್ಲಿ ಭಾಗಿಯಾದರು.