(ವರದಿ: ಮಹದೇವಸ್ವಾಮಿ ಜಿ ಗೌಡ)
ಲೋಕಸಭಾ ಚುನಾವಣಾ ಅಖಾಡ ವಿಭಿನ್ನ ಸನ್ನಿವೇಶಗಳಿಂದಾಗಿ ಗಮನಸೆಳೆದಿದೆ. ಹಲವಾರು ಬೆಳ್ಳಂಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಎಲ್ಲೆಲ್ಲೂ ಮತದಾನ ಕುರಿತ ಜಾಗೃತಿ ಸನ್ನಿವೇಶಗಳೂ ಜನರ ಚಿತ್ತ ಕೇಂದ್ರೀಕರಿಸಿವೆ.
ಈ ನಡುವೆ, ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಚಾಮರಾಜನಗರ ಜಿಲ್ಲಾ ಸ್ವೀಪ್ ಸಮಿತಿ, ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಜಾಗೃತಿ ಸಂದೇಶವನ್ನು ಮುದ್ರಿಸಿ ಈ ಜಾಗೃತಿ ನಡೆಗೆ ಆಕರ್ಷಣೆ ತುಂಬಿದೆ.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಲಕ್ಷ್ಮಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಸವಿತಾ ಸೇರಿದಂತೆ ಹಿರಿಯ ಅಧಿಕಾರಿಗಳು ಮತದಾನದ ದಿನ ಚುನಾವಣಾ ಜಾಗೃತಿಯ ಸಂದೇಶ ಮುದ್ರಿತ ಸೀರೆಗಳನ್ನು ಧರಿಸಿ ಗಮನಸೆಳೆದರು.
‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಸಂದೇಶ ಈ ನಾರಿಯರ ಸೀರೆಗಳಲ್ಲಿ ರಾರಾಜಿಸಿತ್ತು.
ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿ ಶ್ರೀಮತಿ ಶಿಲ್ಪ ನಾಗ್, ಜಿಲ್ಲಾ ನೋಡಲ್ ಅಧಿಕಾರಿ ಸಹಾಯಕ ಚುನಾವಣಾಧಿಕಾರಿ ರವರು ವಿನುತನ ರೀತಿಯಲ್ಲಿ ಘೋಷವಾಕ್ಯವಿರುವ ಸೀರೆಯನ್ನು ಧರಿಸಿ ನೈತಿಕ ಮತದಾನ ಬೆಂಬಲಿಸಲು ಕರೆ ನೀಡಿದರು. @ceo_karnataka @ECISVEEP @SpokespersonECI @shilpa_nag @ZP_chanagar pic.twitter.com/XhevgD0tWj
— DC Chamarajanagar – ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) April 26, 2024
‘ಕೊಳ್ಳೇಗಾಲದ ನೇಕಾರ ಕೃಷ್ಣಮೂರ್ತಿ ಎಂಬವರು ಈ ಸೀರೆಗಳನ್ನು ನೇಯ್ದಿದ್ದಾರೆ. ಸುಮಾರು 10 ಸೀರೆಗಳನ್ನು ಅವರು ತಯಾರಿಸಿದ್ದು, ಈ ಅಧಿಕಾರಿಗಳು ಖರೀದಿಸಿ ಮತದಾನದ ಅರಿವು ಮೂಡಿಸುವ ಪ್ರಯತ್ನಕ್ಕಿಳಿದಿದ್ದಾರೆ.