ರಾಜ್ಯದ 42,000 ಆಶಾ ಕಾರ್ಯಕರ್ತೆಯರಿಂದ ಕೆಲಸದ ಸ್ಥಳದಿಂದ ಅಥವಾ ಮನೆಯಿಂದಲೇ ಹೋರಾಟ.. ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೇ 24 ರಂದು ಆನ್‌ಲೈನ್ ಚಳುವಳಿ..
ಬೆಂಗಳೂರು: ನಾಡು ತುಂಬೆಲ್ಲಾ ಕೊರೋನಾ ಆವರಿಸಿಕೊಂಡಿರುವ ಈ ಸಂದಿಗ್ಧ ಸ್ಥಿತಿಯಲ್ಲೂ ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ಕೆಲಸಮಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಈ ಕಾರ್ಯಕರ್ತೆಯರ ಬಹುಕಾಲದ ನ್ಯಾಯಯುತ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿರುವ ಆಶಾ ಕಾರ್ಯಕರ್ತೆಯರು ಸೋಮವಾರದಂದು ಆನ್‌ಲೈನ್ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲು ತಯಾರಿಯಲ್ಲಿ ತೊಡಗಿದ್ದಾರೆ.
ಈ ಸಂಭಂಧ ಶನಿವಾರ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರ ಸಭೆ ನಡೆದಿದೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮೇ 24ರಂದು ಸೋಮವಾರ ರಾಜ್ಯವ್ಯಾಪಿ ಸುಮಾರು 42000 ಮಂದಿ ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ಕೆಲಸದ ಸ್ಥಳದಿಂದ ಅಥವಾ ಮನೆಯಿಂದ ಆನ್‌ಲೈನ್ ಚಳುವಳಿ ಮಾಡಲು ನಿರ್ಧರಿಸಲಾಯಿತು.
ರಾಜ್ಯದ ಎಲ್ಲಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಸುಮಾರು ಮೂರು ಗಂಟೆಗಳ ಕಾಲ ತಾವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ, ಕೆಲಸ ಮಾಡಲು ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಂದರೆ ಇಲಾಖೆ ಮತ್ತು ಪಂಚಾಯಿತಿ, ಜನಗಳು ಮತ್ತು ಟಾಸ್ಕ್ ಪರ‍್ಸ್ ಸಮಿತಿಯಿಂದ ಆಗುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿಟ್ಟರು. ಮತ್ತೊಂದೆಡೆ ಕುಟುಂಬದ ಸದಸ್ಯರ ಆತಂಕ-ಭಯಗಳ ಮದ್ಯೆ ಅವರು ಎದುರಿಸುತ್ತಿರುವ ನೋವು-ಕಷ್ಟಗಳ ಬಗ್ಗೆ ಬೆಳಕುಚೆಲ್ಲಿದರು. ಕಳೆದ 2 ತಿಂಗಳ ಮತ್ತು ಮೇ ಸೇರಿದರೆ 3 ತಿಂಗಳಿಂದ ವೇತನ ನೀಡದೆ ಇಲಾಖೆಯು ಆಶಾಗಳನ್ನು ಈ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವುದನ್ನು ಆಶಾಗಳು ಅತ್ಯಂತ ದುಃಖದಿಂದ ಹೇಳಿಕೊಂಡರು. ದಿನಸಿಗಾಗಿ ಸಾಲ ಮಾಡಬೇಕೆಂದರೂ ಸಾಲ ಸಿಗದ ಪರಿಸ್ಥತಿ, ಮನೆ ಬಾಡಿಗೆ ನೀಡಲು ಆಗದೇ ಮಾಲೀಕರಿಗೆ ಸಮಯಕ್ಕಾಗಿ ದೈನ್ಯತೆಯಿಂದ ಪದೇ ಪದೇ ಕೇಳುವಂತಹ ಪರಿಸ್ಥಿತಿ, ಮತ್ತೊಂದೆಡೆ ಆಶಾಗಳೇ ಸೋಂಕಿತರಾಗಿ ಬಳಲುತ್ತಿರುವುದು, ಕುಟುಂಬದ ಸದಸ್ಯರು ಸೋಂಕಿನಿಂದ ಬಳಲುತ್ತಿರುವ ಸಂಕಟಗಳನ್ನು ಜೊತೆಗೆ ಸೋಂಕಿನ ಚಿಕಿತ್ಸೆಗೆ ಪರದಾಡಿದ ಕಷ್ಟಗಳನ್ನು ಹಂಚಿಕೊಂಡರು.
ಕೊರೊನ ಎರಡನೆಯ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣವಾಗಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿರುವರು. ಕೊರೋನಾ ಪೀಡಿತರನ್ನು ಇನ್ನಿತರೆ ಸಿಬ್ಬಂದಿಗಳು ಪಿಪಿಇ ಕಿಟ್ ನೊಂದಿಗೆ ಎಲ್ಲಾ ಸುರಕ್ಷಣಾ ಕ್ರಮದೊಂದಿಗೆ ಪರೀಕ್ಷೆ ಅಥವಾ ಚಿಕಿತ್ಸೆ ಮಾಡುವರು. ಆದರೆ ಬಹುತೇಕ ಕಡೆಗಳಲ್ಲಿ ಆಶಾಗಳ ಕೈಗೆ ಆಕ್ಸಿ ಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸಿರುವರು. ಅಗತ್ಯವಿರುವ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಡದೆ ಶಸ್ತಾçಸ್ತಗಳಿಲ್ಲದೆ ಯುದ್ಧಕ್ಕೆ ಕಳಿಸಿರುವುದು ಸಭೆಯ ಮೂಲಕ ಮತ್ತೆ ಮತ್ತೆ ಸಾಬೀತಾಯಿತು. ಇದು ನಿಜಕ್ಕೂ ಇಲಾಖೆಯ ಅಮಾನವೀಯ ಮುಖವನ್ನು ತೆರೆದಿಟ್ಟಿತು.
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸುಮಾರು 20-40ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೋನಾ ಸೋಂಕಿಗೆ ಒಳಗಾಗಿರುವುದು ಕೆಲವರು ಗುಣಮುಖರಾಗಿರುವುದು ಮತ್ತೆ ಹೊಸಬರು ಸೋಂಕಿತರಾಗುತ್ತಿರುವುದು ಬೆಳಕಿಗೆ ಬಂದಿದೆ.
ಇಷ್ಟೆಲ್ಲಾ ಅಸುರಕ್ಷತಾ ನಡುವೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ(ವಲ್ನೆರಬಲ್ ಸರ್ವೆ), ಮಾತ್ರೆ ಹಂಚುವುದು, ಕೊವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು (ಅಪ್ಡೇಟ್)ಇಲಾಖೆಗೆ ಒದಗಿಸುವುದು, ಒಂದನೆ -ಎರಡನೇ ಸಂಪರ್ಕಿತರನ್ನು ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತೊಡಗಿರುವರು. ಕೆಲವೆಡೆ ಇವರಿಗೆ ನಿಯೋಜಿಸಿದ ಕಾರ್ಯಗಳನ್ನು ಹೊರತು ಪಡಿಸಿ ಆಶಾಗಳಿಂದ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ತಿಳಿಸಿದರು. ಅಂದರೆ ಸ್ವಾಬ್ ತೆಗೆಯುವುದು, ವಿವಿಧ ಲಸಿಕಾ ಕೇಂದ್ರದಲ್ಲಿ ಶಿಫ್ಟ್ ಪ್ರಕಾರ ಕೆಲಸ ಹೀಗೆ ವಿವಿಧ ಕೆಲಸಗಳಿಗೆ ಒತ್ತಾಯಿಸುವರು. ಮಾಡಲು ಆಗುವುದಿಲ್ಲವೆಂದರೆ ಕೆಲಸ ಬಿಟ್ಟುಬಿಡಿ ಅಥವಾ ಈ ತಿಂಗಳ ವೇತನ ಮಾಡುವುದಿಲ್ಲವೆಂದು ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ಹೇಳಿಕೊಂಡರು.
ಈ ಎಲ್ಲಾ ರೀತಿಯ ಇಲಾಖೆಯ ಕೆಲಸ ಮಾಡುವಾಗ 2ನೇ ಅಲೆಯಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 5 ಆಶಾಗಳು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ಸುಮಾರು 1000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೋನಾ ಸೋಂಕಿಗೆ ಒಳಗಾಗಿರುವರು. ಈ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ ಬಗ್ಗೆ ಕಾಳಜಿ ಮುತುವರ್ಜಿ ವಹಿಸಬೇಕೆಂದು ಇಲಾಖೆಯನ್ನು ಹಾಗೂ ಸರ್ಕಾರವನ್ನು ಒತ್ತಾಯಿಸಿ ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ಚಳುವಳಿ ನಡೆಯಲಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಶಾ ಕಾರಗಯಕರ್ತೆಯರ ಬೇಡಿಕೆಗಳೇನು?
- ಆಶಾಗಳಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ನೀಡಿ ಸುರಕ್ಷಾ ಕ್ರಮ ಕೈಗೊಳ್ಳಬೇಕು.
- ಕೋವಿಡ್ ಕೆಲಸಕ್ಕೆ ಇತರ ವಾರಿರ‍್ಸ್ಗಳಿಗೆ ಕೋವಿಡ್ ಅಪಾಯ ಭತ್ಯೆ ಮಾಸಿಕ ರೂ.5000 ನೀಡಿದಂತೆ ಆಶಾಗಳಿಗೂ ನೀಡಬೇಕು. (ರಿಸ್ಕ್ ಅಲೊಯನ್ಸ್)
- ಕೋವಿಡ್-19 ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ರೂ.25000 ನೀಡಬೇಕು.
- ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಮತ್ತು ಈಗ ಸೋಂಕಿನಿAಲಂದ ಸಾವಿಗೀಡಾದ ಕುಟುಂಬಕ್ಕೆ ಈಗಾಗಲೇ ಘೋಷಣೆಯಾದ 50 ಲಕ್ಷ ರೂ. ಪರಿಹಾರ ಒದಗಿಸಬೇಕು.
- ಮಾಸಿಕ ಗೌರವಧನ ರೂ.4,000 ಕಳೆದ ಎರಡು ತಿಂಗಳ ಬಾಕಿ ಬಿಡುಗಡೆ ಮಾಡಬೇಕು.