ಬೆಂ.ಮ.ಸಾ.ಸಂಸ್ಥೆಯು ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ QR ಕೋಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅತ್ಯಂತ ಸುಲಭವಾಗಿ ಮೆಟ್ರೊ ಫೀಡರ್ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ನ QR ಕೋಡ್ಗಳ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ (Live tracking) ಮಾಹಿತಿ ದೊರೆಯುತ್ತದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ.
ದಿನಾಂಕ:28.08.2024 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಮೆಟ್ರೊ ಫೀಡರ್ ಸೇವೆಗಳು (Smart City) ನಾಮನಿರ್ದೇಶನಕ್ಕೆ ಪ್ರತಿಷ್ಟಿತ ರಾಷ್ಟ್ರೀಯ ಸ್ಕಾಚ್ ಸಂಸ್ಥೆಯಿಂದ ಆರ್ಡರ್ ಆಫ್ ಮೇರಿಟ್ ಪ್ರಶಸ್ತಿ ಲಭಿಸಿದೆ.
ಸ್ಕೋಚ್ ಗ್ರೂಪ್ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ವಿನೂತನ ಉಪಕ್ರಮಕ್ಕಾಗಿ ನಿಗಮವು ಕೈಗೊಂಡ ಹೊಸ ಕ್ರಮಗಳಿಗಾಗಿ ಅವರು ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.