ಮಂಗಳೂರು: ರಾಜ್ಯದ ಅಂಗನವಾಡಿಗಳು ಇನ್ನು ಮುಂದೆ ಸರ್ಕಾರಿ ಮೊಂಟೆಸರಿ’ ಶಾಲೆಗಳಾಗಿ ಮಾರ್ಪಾಡಾಗಲಿದೆ. ಸುಮಾರು 50 ವರ್ಷ ಹಳೆಯ ಅಂಗನವಾಡಿಯನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕೆಂಬ ಸಲಹೆಗಳಿಗೆ ಸಿದ್ದರಾಮಯ್ಯ ಸರ್ಕಾರ ಸಹಮತ ಹೊಂದಿದ್ದು, ಇನ್ನು ಮುಂದೆ ಅಂಗನವಾಡಿಗಳು “ಸರ್ಕಾರಿ ಮೊಂಟೆಸರಿ’ ಶಾಲೆಗಳಂತೆ ಮೇಲ್ದರ್ಜೆಗೇರಲಿದೆ.
‘ಸರ್ಕಾರಿ ಮೊಂಟೆಸರಿ’ ವಿಶೇಷ:
-
50 ವರ್ಷ ಹಳೆಯ ಪರಿಕಲ್ಪನೆಗೆ ಹೊಸ ರೂಪ
-
ಅಂಗನವಾಡಿಗಳು ಇನ್ನು ಮುಂದೆ ‘ಸರ್ಕಾರಿ ಮೊಂಟೆಸರಿ’
-
ರಾಜ್ಯದಲ್ಲಿ 70 ಸಾವಿರ ಅಂಗನವಾಡಿಗಳಿವೆ
-
ಮೊದಲ ಹಂತದಲ್ಲಿ 20 ಸಾವಿರ ಅಂಗನವಾಡಿಗಳು ಮೊಂಟೆಸರಿ’ ಗಳಾಗಿ ಪರಿವರ್ತನೆ.
-
ಉತ್ತಮ ಶಿಕ್ಷಣಕ್ಕೆ ಕ್ರಮ.
-
ಪದವೀಧರ ಅಂಗನವಾಡಿ ಕಾರ್ಯಕರ್ತರಿಗೆ ವಿಶೇಷ ತರಬೇತಿ.
ರಾಜ್ಯದ ಅಂಗನವಾಡಿಗಳನ್ನು ಸರ್ಕಾರಿ ಮೊಂಟಸರಿಗಳಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆರಂಭವಾಗಿದೆ
ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿಗಳಿದ್ದು, ಸದ್ಯ 20 ಸಾವಿರ ಅಂಗನವಾಡಿಗಳನ್ನು ‘ಸರ್ಕಾರಿ ಮೊಂಟೆಸರಿ’ ಗಳಾಗಿ ಪರಿವರ್ತನೆಯಾಗಲಿದೆ. ಅನಂತರ ಇತರ ಅಂಗನವಾಡಿಗಳತ್ತ ಗಮನಕೊಡಲಾಗುವುದು ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅವರು, ‘ಸರ್ಕಾರಿ ಮೊಂಟೆಸರಿ’ಗಳಲ್ಲಿ ಉತ್ತಮ ಶಿಕ್ಷಣ ನೀಡುವ ಸಂಬಂಧ ಶಿಕ್ಷಕರ ವಿದ್ಯಾರ್ಹತೆಯನ್ನು ಪರಿಗಣಿಸಿ, ಸೂಕ್ತ ತರಬೇತಿನೀಡಲಾಗುವುದು ಎಂದ ಅವರು, ಇದೀಗ ಸುಮಾರು 15 ಸಾವಿರ ಅಂಗನವಾಡಿ ಕಾರ್ಯಕರ್ತರು ಪದವಿ ಹಾಗೂ 2 ಸಾವಿರ ಮಂದಿ ಸ್ನಾತಕೋತ್ತರ ಪದವೀಧರರಿದ್ದಾರೆ. ಅಂಥವರನ್ನು ಗುರುತಿಸಿ ತರಬೇತಿ ನೀಡಲಾಗುವುದು ಎಂದರು.