ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಕನ್ನಡ ಭಾಷೆ ಬಗ್ಗೆ ಗೊಂದಲ ಸೃಷ್ಟಿಯಾದ ಬೆಳವಣಿಗೆಯಲ್ಲಿ ಗೂಗಲ್ ಸಂಸ್ಥೆ ಕ್ಷಮೆಯಾಚಿಸಿದ ಬೆನ್ನಲ್ಲೇ ಇದೀಗ ಅಮೆಜಾನ್ ಎಂಬ ಹೆಸರಲ್ಲಿ ಸೃಷ್ಟಿಯಾಗಿರುವ ಆನ್‌ಲೈನ್ ಶಾಪಿಂಗ್ ಸೈಟ್ ಕೂಡಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕನ್ನಡ ಧ್ವಜವನ್ನು ಹೋಲುವ ಬಟ್ಟೆ ಹಾಗೂ ಲಾಂಛನವನ್ನು ಬಿಕಿನಿಯನ್‌ನಾಗಿಸಿದ ಆರೋಪ ಅಮೇಜಾನ್ ಎಂಬ ಆನ್‌ಲೈನ್ ಶಾಪಿಂಗ್ ಸೈಟ್ ವಿರುದ್ದ ಕೇಳಿಬಂದಿದೆ.
ಕೆಲ ದಿನಗಳ ಹಿಂದಷ್ಟೇ ಭಾರತದ ಅತ್ಯಂತ ಕೊಳಕು ಭಾಷೆ ಎಂದು ಗೂಗಲ್ನಲಿ ಹುಡುಕಾಡಿದಾಗ ಕನ್ನಡ ಬಾ಼ಷೆಯನ್ನು ತೋರಿಸುತ್ತಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಗೂಗಲ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆ ಕ್ಷಮೆ ಯಾಚಿಸಿತ್ತು.
ಇದಾದ ಎರಡೇ ದಿನಗಳಲ್ಲಿ ಅಮೆಜಾನ್ ಎಂಬ ಶಾಪಿಂಗ್ ಸೈಟ್ ಕೂಡಾ ಎಡವಟ್ಟಿಗೆ ಸಾಕ್ಷಿಯಾಗಿದೆ. ಕನ್ನಡ ಧ್ವಜವನ್ನು ಹೋಲುವ ಬಟ್ಟೆ ಹಾಗೂ ಲಾಂಛನವನ್ನು ಬಿಕಿನಿಯನ್ನಾಗಿಸಿ ಮಾರಾಟ ಮಾಡುವ ಆರೋಪ ಕೇಳಿ ಬಂದಿದೆ.
Brand: BKDMHHH (BKDMHHH Women’s Flag of Karnataka Original Design Slim Fit Tie Side Laces Triangle Chic Trimmer for Girl’s) ಎಂಬ ಶೀರ್ಷಿಕೆ ಮೂಲಕ ಈ ಬಿಕಿನಿ ಮಾರಾಟ ನಡೆದಿದ್ದು ಈ ಬಗ್ಗೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
#ಕನ್ನಡದ್ರೋಹಿAmazonca
Hello Amazon, dont play with kannada sentiments. First remove your undergarments pic of Kannada flag. Upologise kannada ppl if want to continue your business in karnataka.— Raveesh Sarja (@RaveeshSarja) June 5, 2021
ಸಾಮಾಜಿಕ ಜಾಲತಾಣಗಳಲ್ಲಿ ಈ ಸೈಟ್ ವಿರುದ್ದ ಕನ್ನಡದ್ರೋಹಿAmazonca ಎಂಬ ಅಭಿಯಾನ ಚುರುಕಾಗಿದೆ.
How dare u do this😠😠😠😠 Don't try to mess with emotion of Kannadigas https://t.co/97IwC6mbEW @amazonca @amazon @AmazonHelp #ಕನ್ನಡದ್ರೋಹಿAmazonca @ArvindLBJP @CMofKarnataka @hd_kumaraswamy @siddaramaiah @KirikKeerthi
— Amogh Mangi – ಅಮೋಘ ಮಂಗಿ (@AmoghmangiOKKK) June 5, 2021
Dear @amazon there is a product that is a womens innerwear printed with Karnataka flag available in ur website . Dont try to mess with emotion of Kannadigas . Kindly remove the product @AmazonHelp #ಕನ್ನಡದ್ರೋಹಿAmazonca @amazonIN @CMofKarnataka @PMOIndia#RemoveKaFlagFromAmazon pic.twitter.com/4gdTxPynPi
— RafiqAli Dubai Kannadiga (@RKundanda) June 5, 2021