ಬೆಂಗಳೂರು: ಚುನಾವಣಾ ಕಾರ್ಯಗಳಿಗೆ KSRTC ಬಸ್ಸುಗಳನ್ನು ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಬಳಸುತ್ತಿರುವುದು ಸಾಮಾನ್ಯ. ಇದೀಗ ಕೆಎಸ್ಸಾರ್ಟಿಸಿ ಬಸ್ ಜೊತೆಗೆ ನಿಗಮದ ನಮ್ಮ ಕಾರ್ಗೋ ಟ್ರಕ್‌ಗಳನ್ನೂ ಚುನಾವಣಾ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಬೆಂಗಳೂರು ನಗರದ ರಸ್ತೆಯಲ್ಲಿಂದು ಸಾಲು ಸಾಲು ನಮ್ಮ ಕಾರ್ಗೋ ಟ್ರಕ್‌ಗಳನ್ನು ನೋಡಿ ಜನರು ನಿಬ್ಬೆರಗಾದರು. ಒಟ್ಟೊಟ್ಟಿಗೆ ನಿಂತ ಅದರ ಮುಂದಿನ ಗ್ಲಾಸ್‌ನ ಬಲಭಾಗದಲ್ಲಿ ‘ತುರ್ತು ಚುನಾವಣಾ’ ಎಂಬ ಬರಹ ಕುತೂಹಲದ ಕೇಂದ್ರಬಿಂದುವಾಗಿತ್ತು.
ನಾಲ್ಕೈದು ತಿಂಗಳ ಹಿಂದಷ್ಟೇ ‘ನಮ್ಮ ಕಾರ್ಗೋ’ ಬ್ರಾಂಡ್ ಹೆಸರಿನೊಂದಿಗೆ 20 ಟ್ರಕ್ ಗಳನ್ನು ಸೇರ್ಪಡೆಗೊಳಿಸಿ, ಸೇವೆಯನ್ನು ಒದಗಿಸುವ ಸಾಹಸಕ್ಕೆ ಕೈಹಾಕಿದ್ದ KSRTCಗೆ ಇದೀಗ ಚುನಾವಣಾ ಕಾರ್ಯದಲ್ಲಿ ಸಾಥ್ ನೀಡುವ ಅವಕಾಶ ಸಿಕ್ಕಿದೆ.
ಸಾರಿಗೆ ಸಂಸ್ಥೆ ವಿವಿಧ ಮೂಲಗಳಿಂದ ಆದಾಯ ಕ್ರೋಡಿಕರಿಸುವ ಪ್ರಯತ್ನದಲ್ಲಿದ್ದು ಹೊಸ ಹೊಸ ಅನ್ವೇಷಣೆಗಳಿಗತ್ತ ಗಮನಕೇಂದ್ರೀಕರಿಸಿದೆ. ಲ ಸೇವೆಯೊಂದಿಗೆ ವಾಣಿಜ್ಯ ನಡೆಯೂ ನಿಗಮದ ಬೆಳವಣಿಗೆಗೆ ಆಧಾರವಾಗಿದೆ ಎಂಬುದು ಸತ್ಯ.