ಬೆಂಗಳೂರು: ಕೊರೋನಾ ವೈರಾಣು ಸೋಂಕು ತಡೆಯುವ ಸಂಬಂಧ ಸರ್ಕಾರ ಜಾರಿಗೊಳಿಸಿದ್ದ ಲಾಕ್’ಡೌನ್ ಹಲವರ ಪಾಲಿಗೆ ಸಂಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದೆ. ಈ ಅವಧಿಯಲ್ಲಿ ಅನೇಕ ಕಾರ್ಮಿಕರು ತೊಂದರೆಗೊಳಗಾಗಿದ್ದರೆ. ಅನೇಕ ಸಂಸ್ಥೆಗಳು ಕಾರ್ಮಿಕರಿಗೆ ವೇತನ ನೀಡದೆ ಸರ್ಕಾರದ ಆದೇಶ ಉಲ್ಲಂಘಿಸಿವೆ ಎಂಬ ಆರೋಪಗಳೂ ಕೇಳಿಬಂದಿವೆ.
ಈ ನಡುವೆ ಕಾರ್ಮಿಕರ ನೆರವಿಗೆ ಧಾವಿಸಿರುವ AIUTUC ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಗಮನಸೆಳೆಯಿತು.
AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ವತಿಯಿಂದ ವಸತಿ ನಿಲಯ ಕಾರ್ಮಿಕರಿಗೆ ಲಾಕ್ಡೌನ ಅವದಿಯ ಸಂಬಳ ಬಿಡುಗಡೆಮಾಡಿ, ಬಾಕಿ ವೇತನ ಪಾವತಿಸಿ, ESI-PF ಸೌಲಭ್ಯಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಯಿತು. ರಾಜ್ಯವ್ಯಾಪಿ ಪ್ರತಿಭಟನೆಯ ಅಂಗವಾಗಿ ಬೆಂಗಳೂರಿನ ಬಿಸಿಎಂ ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ಧಾರವಾಡ ಜಿಲ್ಲಾ ಕೇಂದ್ರದಲ್ಲೂ ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ವೇತನಕ್ಕಾಗಿ ಆಗ್ರಹಿಸಿದರು.
ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಗಮನಸೆಳೆಯಿತು. ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾರ್ಮಿಕ ಮುಖಂಡರು ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.