ನವದೆಹಲಿ: ನಮ್ಮ ದೇಶ 10 ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ ಎಂದಿರುವ ನಟಿ ರಶ್ಮಿಕಾ ಮಂದಣ್ಣ, ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಹಾಡಿ ಹೊಗಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಮ್ಮ ದೇಶದ ಅಭಿವೃದ್ಧಿ ಗಮನಿಸಿದರೆ ಇನ್ನು ತಡೆಯಲು ಸಾಧ್ಯವಿಲ್ಲ. ಏಳು ವರ್ಷಗಳಲ್ಲಿ 20 ಕಿ.ಮೀ ಸೇತುವೆ ಅದ್ಭುತವಾಗಿ ನಿರ್ಮಾಣವಾಗಿದೆ. ಅಟಲ್ ಸೇತು ಯೋಜನೆಯಿಂದಾಗಿ 2 ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮುಗಿಸಬಹುದು. ಈಗ ನವಿ ಮುಂಬೈಯಿಂದ ಮುಂಬೈಗೆ, ಗೋವಾದಿಂದ ಮುಂಬೈಗೆ ಹಾಗೂ ಬೆಂಗಳೂರಿನಿಂದ ಮುಂಬೈಗೆ ಸುಲಭ ಪ್ರಯಾಣ ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಇದನ್ನೆಲ್ಲಾ ನೋಡಿದರೆ ಹೀಗೂ ಇದೆಯಾ ಎನ್ನುವಂತಿದೆ ಎಂದು ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಕೊಂಡಾಡಿದ ರಶ್ಮಿಕಾ, ಈಗ ಭಾರತವು ಎಲ್ಲದರಲ್ಲೂ ಸೈ ಎನ್ನುವಂತಿದೆ ಎಂದು ಬಣ್ಣಿಸಿದ್ದಾರೆ.
#WATCH | Mumbai: On the Mumbai-trans Harbour Link (MTHL) Atal Setu, Actor Rashmika Mandana says, “Who would have thought that something like this would have been possible. Now we can easily travel from Mumbai to Navi Mumbai. India is moving very fast and growing at a fast pace.… pic.twitter.com/ACwSoSNaa7
— ANI (@ANI) May 14, 2024