ಸ್ಯಾಂಡಲ್‌ವುಡ್ ಸುಂದರಿ, ನಟಿ ಪ್ರಣೀತ ಸದ್ದಿಲ್ಲದೇ ಹಸಮಣೆ ಏರಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲೇ ನಟಿ ಪ್ರಣೀತಾ ಅವರು ಉದ್ಯಮಿಯೊಬ್ಬರ ಕೈಹಿಡಿದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ನಟಿ ಪ್ರಣೀತಾ ಅವರ ಮದುವೆ ಬಗ್ಗೆ ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ನಟಿ ಹಾಗೂ ಅವರ ಬಳಗದವರು ನಿರಾಕರಿಸಿದ್ದರು ಆದರೆ ಇದೀಗ ಅವರು ಹಸಮಣೆ ಏರಿರುವ ಸುದ್ದಿ ಎಲ್ಲರ ಗಮನಸೆಳೆದಿದೆ.
ಪ್ರಣೀತಾ ಮದುವೆ ಆಗಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಣೀತ ಅವರು ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಪರಿಚಿತ ನಟಿ. ಕನ್ನಡದಲ್ಲಿ ಪೊರ್ಕಿ, ಜರಾಸಂದ, ಬ್ರಹ್ಮ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು ಹಾಗು ಬಾಲಿವುಡ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇದೀಗ ಅವರು ಉದ್ಯಮಿ ಸುಭಾಷ್ ಅವರನ್ನು ಮದುವೆಯಾಗಿ ಬದುಕಿನ ಹೊಸ ಪಯಣ ಆರಂಭಿಸಿದ್ದಾರೆ.