ಗದಗ : ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಗದಗ್‌ನ ಅಭಿಮಾನಿಯೊಬ್ಬ ತಾನು ಸಾಕಿ ಬೆಳಿಸಿದ ಮೆಚ್ಚಿನ ಟಗರನ್ನು ಗಿಫ್ಟ್ ಆಗಿ ನೀಡಿದ್ದಾನರೆ.
ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಸಿನಿಮಾದ ಫ್ರೀ ಲಾಂಚಿಂಗ್ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನಟ ದರ್ಶನ್ ಅವರಿಗೆ ಈ ಕೊಡುಗೆ ಸಮರ್ಪಿಸಿದ್ದಾರೆ. ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದರ್ಶನ್ ಅವರು ಅಭಿಮಾನಿಯನ್ನು ನೋಡಿದ ತಕ್ಷಣ ಕಾರಿನಿಂದ ಇಳಿದು ಆತನ ಉಡುಗೊರೆಯನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.
ಶಂಭು ಗದಗನ ಶಿರಸಂಗಿ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಈ ಯುವಕ, ಸುಮಾರು ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನು ನೆಚ್ಚಿನ ನಟನಿಗೆ ಕೊಡುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಸದ್ಯ ದರ್ಶನ್ ಟಗರನ್ನು ತೆಗೆದುಕೊಂಡು ಹೋಗಿಲ್ಲಾ. ಆದರೆ ಅಭಿಮಾನಿ ಶಂಭುಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ಆಹ್ವಾನ ನೀಡಿದ್ದಾರಂತೆ. ತಾವು ಒಂದು ವಾಹನ ಕಳಿಸುವುದಾಗಿ ತಿಳಿಸಿರುವ ಅವರು ವಾಹನದಲ್ಲಿ ಟಗರು ಮತ್ತು ನೀನು ಇಬ್ಬರು ಬನ್ನಿ ಅಂತ ಆತನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದಲ್ಲಿ ಬ್ಯೂಸಿ ಸೆಡ್ಯೂಲ್ ನಲ್ಲಿ ಇರೋದ್ರಿಂದ ಸದ್ಯ ಟಗರನ್ನು ಫಾರ್ಮ ಹೌಸ್ ಗೆ ತೆಗೆದುಕೊಂಡು ಹೋಗುವುದಾಗುವುದಿಲ್ಲಾ. ಹಾಗಾಗಿ ನೀನೆ ಬಾ ಅಂತ ತಿಳಿಸಿದ್ದಾರೆ ಎಂದು ಶಂಭು ಹೇಳಿಕೊಂಡಿದ್ದಾನೆ. .