ಬೆಂಗಳೂರು: ಕೊರೋನಾ ವೈರಾಣು ಹಾವಳಿ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಆರಂಭ ವಿಳಂಬವಾಗಿವೆ. ಹಾಗಾಗಿ ಆನ್‌ಲೈನ್ ಮೂಲಕ ಪಠ್ಯಕ್ರಮ ಅನುಸರಿಸಲಾಗುತ್ತಿದೆ. ಇದೇ ವೇಳೆ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಯೂಟ್ಯೂಬ್ ಪಾಠ ಆರಂಭಿಸಿದೆ.
ಯೂ ಟ್ಯೂಬ್ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರೀ ರೆಕಾರ್ಡೆಡ್ ಕ್ಲಾಸ್ ಆರಂಭವಾಗಿದ್ದು https://www.youtube.com/c/dpuedkpucpa ಲಿಂಕ್ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ.
ಪ್ರತಿ ದಿನ 45 ನಿಮಿಷಗಳ 4 ಅವಧಿಯ ತರಗತಿಗಳು ಲಭ್ಯವಾಗಲಿದೆ. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ. ಇದನ್ನು ವಿದ್ಯಾರ್ಥಿಗಳ ಪ್ರಯೋಜನವಾಗಿಸಲು ಆಯಾ ಕಾಲೇಜುಗಳ ಪ್ರಾಧ್ಯಾಪಕರನ್ನೇ ಹೊಣೆಗಾರರನ್ನಾಗಿಸಲಾಗಿದೆ ಎಂದು ಪಿಯು ಮಂಡಳಿ ಹೇಳಿದೆ.
ದ್ವಿತೀಯ ಪಿಯು ಯೂಟ್ಯೂಬ್ ತರಗತಿಯ ವೇಳಾಪಟ್ಟಿ ಹೀಗಿದೆ:
- ಜುಲೈ 23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್)
- ಜುಲೈ 24: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ (ನೋಟ್ಸ್) ಗಣಿತ / ಅರ್ಥಶಾಸ್ತ್ರ ಗಣಿತ / ಅರ್ಥಶಾಸ್ತ್ರ (ನೋಟ್ಸ್)
- ಜುಲೈ 25: ಗಣಿತ /ಇತಿಹಾಸ ಗಣಿತ/ಇತಿಹಾಸ (ನೋಟ್ಸ್) ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
- ಜುಲೈ 27: ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ನೋಟ್ಸ್ ಕಂಪ್ಯೂಟರ್ ಸೈನ್ಸ್/ ಸಮಾಜಶಾಸ್ತ್ರ ನೋಟ್ಸ್
- ಜುಲೈ 28: ಬೇಸಿಕ್ ಮ್ಯಾಥ್ಸ್ / ಸಮಾಜಶಾಸ್ತ್ರ ನೋಟ್ಸ್ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್
- ಜುಲೈ 29: ಇಂಗ್ಲಿಷ್ ನೋಟ್ಸ್ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್
- ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್
- ಜುಲೈ 31: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ನೋಟ್ಸ್ ಗಣಿತ/ಅರ್ಥಶಾಸ್ತ್ರ ನೋಟ್ಸ್
- ಆಗಸ್ಟ್ 1: ಗಣಿತ/ಇತಿಹಾಸ ನೋಟ್ಸ್ ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್