ಕೋಲಾರಕ್ಕೆ ಬುಧವಾರ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಕೆ.ಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ ಇರುವ ಅಗ್ರಹಾರ ಕೆರೆ ವೀಕ್ಷಣೆಗು ಹೋಗಿದ್ದಾರೆ.ಇದನ್ನು ತಿಳಿದ ಕನರ್ಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷೆ ನಳಿಳಿ ಗೌಡ ಮತ್ತು ಮತ್ತೋರ್ವ ಮಹಿಳಾ ಹೋರಾಟಗಾತರ್ಿ ಸಚಿವರ ಬಳಿ ಬಂದು ಅಲ್ಲಿರುವ ಸಮಸ್ಯೆಯನ್ನು ವಿವರಿಸಿ ಹೇಳಿದ್ದಾರೆ.
ದಯಮಾಡಿ ಅಗ್ರಹಾರ ಕೆರೆಯಲ್ಲಿನ ಒತ್ತುವರಿಯನ್ನು ತೆರೆವುಗೊಳಿಸಿ ಎಂದು ಸಚಿವರ ಬಳಿ ಮನವಿ ಮಾಡಿದ್ದಾರೆ.ಆದ್ರೆ ಇದಕ್ಕೆ ಕ್ಯಾರೆ ಅನ್ನದ ಸಚಿವರು ತಕ್ಷಣ ಗರಂ ಆಗಿ ಮಹಿಳೆಗೆ ತಿರುಗಿಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀನುನ ತೆರವು ಮಾಡ್ತೀಯೇನಮ್ಮ ಎಂದು ಗದರಿಸಲು ಶುರುಮಾಡಿದಾಗ ಪ್ರತ್ಯುತ್ತರ ನೀಡಿದ ನಳಿನಿಗೌಡ ಅದು ನಮ್ಮ ಕೆಲಸ ಅಲ್ಲಾ ಸರ್ .ಅದು ನಿಮ್ಮ ಕೆಲಸ ಅದನ್ನು ನೀವು ಮಾಡಿ ಅಂತ ಹೇಳಿದ್ದೇ ತಡ ಕೂಡಲೇ ಈ ಮಾತಿಗೆ ಕೆಂಡಾಮಂಡಲವಾದ ಸಚಿವ ಮಾಧುಸ್ವಾಮಿ ನಾನು ಬಾರಿ ಕೆಟ್ಟ ಮನುಷ್ಯ ಇದ್ದೀನಿ ಬಾಯಿ ಮುಚ್ಚು ರಾಸ್ಕಲ್ ಎಂದು ಮಹಿಳೆಗೆ ಗದರಿಸಿದ್ದಾರೆ.
ಅಷ್ಟು ಹೇಳಿದ್ದಲ್ಲದೆ ಪೊಲೀಸ್ ಅಧಿಕಾರಿಗಳನ್ನು ಕರೆದು ಕೂಡಲೇ ಇಬ್ಬರು ಮಹಿಳೆಯರನ್ನೂ ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಹಾಕಿಸಿದ್ದಾರೆ.. ಇನ್ನು ಸಚಿವ ಈ ಮಾತನ್ನು ನೂರಾರು ಜನ ಹಾಗೂ ಸ್ವತ: ಪೊಲೀಸರ ಎದುರೇ ಹೇಳಿದ್ದು ರಾಜ್ಯಾದ್ಯಂತ ಇದೀಗ ದೊಡ್ಡ ಸುದ್ದಿಯಾಗುತ್ತಿದೆ.ಸಾಮಾಜಿಕ ಜಾಲತಾಣದಲ್ಲು ಸಚಿವ ನಾಲಿಗೆ ಹರಿಬಿಟ್ಟಿರೋ ವೀಡಿಯೋ ವೈರಲಾಗಿದ್ದು ಸಚಿವ ನಡೆಗೆ ತೀವೃ ವಿರೋಧ ವ್ಯಕ್ತವಾಗುತ್ತಿದೆ