ಕೊರೊನಾ ಎಫೆಕ್ಟ್ ಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಹೀಗಿರುವಾಗ ಮಾಂಸ ತಿನ್ನೋದಕ್ಕೂ ಜನರು ಹೆದರೋ ಪರಿಸ್ಥಿತಿ ಕರವಾಳಿಯಲ್ಲಿ ಉಂಟಾಗಿದೆ. ಮೀನು ತಿನ್ನೋನ ಅಂದ್ರೆ ಮೀನುಗಾರಿಕೆ ಕೂಡ ನಿಲ್ಲಿಸಿದ್ದಾರೆ . ಇದಕ್ಕೆಲ್ಲ ಕಾರಣ ಒಂದೇ ಕೊರೊನಾ ಅನ್ನೋ ಮಹಾಮಾರಿ ವೈರಸ್. ಹಾಗಾಗಿ ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಮೀನುಗಾರಿಕೆಗೆ ಅವಕಾಶ ನೀಡಿ ಅಂದಿದ್ದಾರೆ. ಹೌದು ಮೀನುಗಾರಿಕೆ ಈ ಕೂಡಲೇ ಆರಂಭಿಸಿ, ಮೀನು ಮಾರಾಟ ಮಾಡಲು ಮೈದಾನಗಳಲ್ಲಿ ಅವಕಾಶ ನೀಡಿ. ಕೊರೊನಾ ಎದುರಿಸಲು ಮೀನಿನೆಣ್ಣೆ ಸಹಕಾರಿ ಅಂತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದಾರೆ.ಒಂದು ಮಾಹಿತಿಯ ಪ್ರಕಾರ ಮೀನಿನೆಣ್ಣೆಯಲ್ಲಿ ವೈರಸ್ ನ್ನು ತಡೆಗಟ್ಟುವಂತಹ ಶಕ್ತಿ ಇದೆ. ಸದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ಅವರು ಹೇಳಿರುವಂತೆ ಮೀನುಗಾರಿಕೆ ಮಾಡಲು ಸರ್ಕಾರ, ದ.ಕ. ಜಿಲ್ಲಾಡಳಿತ ಅವಕಾಶ ನೀಡಿದ್ರೆ ಉತ್ತಮ. ಹಾಗಯೇ ಮೀನುಗಾರರು ಅಷ್ಟೆ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಮೀನುಗಾರಿಕೆ ಮಾಡಬೇಕಿದೆ. ಜೊತೆಗೆ ಮಾರಾಟ ಮಾಡುವಾಗಲೂ ಅಷ್ಟೇ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಮೀನು ಮಾರಾಟ ಮಾಡಬೇಕಿದೆ. ಹಾಗಾಗಿ ಡಾ.ಕಕ್ಕಿಲಾಯರು ಹೇಳಿದಂತೆ ಮೀನುಗಾರಿಕೆ ನಡೆಸಲು ಅವಕಾಶವೊಂದು ಸಿಕ್ಕಿದ್ದಲ್ಲಿ ಕರಾವಳಿಗರಿಗೆ ಮೀನಿನ ರುಚಿ ಕೆಲ ದಿನಗಳ ಬಳಿಕ ಮತ್ತೆ ಆಸ್ವಾಧಿಸುವಂತ ಸಾಧ್ಯತೆ ಇದೆ.
© 2020 Udaya News – Powered by RajasDigital.