ದಾವಣಗೆರೆಯಲ್ಲಿ ಯಾರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದ್ರೆ ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಹಲವು ಆಕಾಂಕ್ಷಿಗಳ ನಡುವೆ ಈಗ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ವಿರೇಶ್ ಹನಗವಾಡಿ ಆಯ್ಕೆಯಾಗಿದ್ದಾರೆ.
ಬಿಜೆಪಿ ವರಿಷ್ಠರು ಪಕ್ಷ ನಿಷ್ಠೆ ಗುರುತಿಸಿ ವಿರೇಶ್ ಹನಗವಾಡಿಯವರನ್ನು ನೇಮಿಸಿದ್ದಾರೆ.ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರು, ನನಗೆ ಬಹಳ ಖುಷಿಯಾಗ್ತಿದೆ. ನನ್ನ ಪಕ್ಷ ನಿಷ್ಠೆಗೆ ವರಿಷ್ಠರು ಬೆಂಬಲಿಸಿದ್ದಾರೆ.ನನ್ನ ಆಯ್ಕೆಗೆ ಸಹಕರಿಸಿದ ಜಿ.ಎಂ ಸಿದ್ದೇಶ್ವರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು – ಬಿಜೆಪಿಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ರು. ಹಾಗಯೇ ಮುಂದಿನ ದಿನಗಳಲ್ಲಿ ನನ್ನ ಸ್ಥಾನದ ಕೆಲಸವನ್ನು ಬಹಳ ಜವಬ್ಧಾರಿ ಹಾಗೂ ಮುತುವರ್ಜಿಯಿಂದ ನಿರ್ವಹಿಸುತ್ತೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆಂದಿದ್ದಾರೆ.