“ಅಪ್ಪ ಅಮ್ಮ ಹೆಸರಿಟ್ಟರೆ ವಾಡಿಕೆ; ನಮಗೆ ನಾವೇ ಹೆಸರಿಟ್ಟುಕೊಂಡರೆ ಬೇಡಿಕೆ ” ಈ ಡೈಲಾಗ್ ಕೇಳಿಸಿದ್ದು ಜೇಮ್ಸ್ ಚಿತ್ರದ ಮೂಹುರ್ತ ಸಂದರ್ಭದಲ್ಲಿ . ಪವರ್‍ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಮೂಹುರ್ತ ಭಾನುವಾರ ಬೆಂಗಳೂರಿನ ಬಾಲಾಂಜನೇಯ ದೇವಸ್ಥಾನದಲ್ಲಿ ನೆರವೇರಿದೆ.ಮೊದಲ ದೃಶ್ಯಕ್ಕೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈಗಾಗಲೇ ಜೇಮ್ಸ್ ಚಿತ್ರದ ಮೋಷನ್ ಪೋಷ್ಟರ್ ರಿಲೀಸ್ ಆಗಿದ್ದು ; ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಬಹದ್ದೂರ್ , ಭರ್ಜರಿ ಭರಾಟೆ ಹಿಟ್ ಚಿತ್ರದ ನಂತರ ನಿರ್ದೇಶಕ ಚೇತನ್ ಜೇಮ್ಸ್ ಅನ್ನೋ ಕ್ರೀಡಾಲೋಕದ ಕಥೆಯ ಮೂಲಕ ಮತ್ತೊಂದು ಸೂಪರ್ ಹಿಟ್ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ ಕಿಶೋರ್ ಬಂಡವಾಳ ಹೂಡಿದ್ದಾರೆ
ಮೂಹುರ್ತ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಚೇತನ್ ಈ ಹಿಂದೆನೇ ಜೇಮ್ಸ್ ಚಿತ್ರ ಆರಂಭವಾಗಬೇಕಿತ್ತು ಆದ್ರೆ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದ್ರು. ಜೊತೆಗೆ ರಾಜ್ ಕುಟುಂಬದವರ ಜೊತೆ ಮುಂಚಿನಿಂದಲೂ ಸಿನಿಮಾ ಮಾಡಬೇಕೆಂಬ ಆಸೆಯಿತ್ತು .ಅದು ಜೇಮ್ಸ್ ಚಿತ್ರದ ಮೂಲಕ ಈಡೇರುತ್ತಿದೆ ಅಂತ ನಿರ್ಮಾಪಕ ಕಿಶೋರ್ ಮನದ ಮಾತನ್ನು ಹೇಳಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದು; ಡೈರೆಕ್ಟರ್ ಚೇತನ್ ಕಥೆ ಚೆನ್ನಾಗಿ ರೆಡಿಮಾಡಿದ್ದಾರೆ; ಒಳ್ಳೆಯ ಟೀಮ್ ಕೂಡ ಇದೆ . ಹಾಗಾಗಿ ಚಿತ್ರವನ್ನು ಒಪ್ಪಿಕೊಂಡೆ ಜೊತೆಗೆ ಇದೇ ಮೊದಲ ಬಾರಿಗೆ ಕ್ರೀಡಾಪಟುವಿನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆ ಅಂತ ಚಿಕ್ಕದಾಗಿ ಚಿತ್ರದ ಬಗ್ಗೆ ಹಿಂಟ್ ಬಿಟ್ಟು ಕೊಟ್ಟಿದ್ದಾರೆ. ಇನ್ನು ಮೂಹುರ್ತ ಸಂದರ್ಭ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ರು.