ಬೇಬಿಡಾಲ್ ನಿವೇದಿತಾ ಒಂದಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಮಿಲಿಯನ್ ರೇಂಜ್‍ನಲ್ಲಿ ಫ್ಯಾನ್ ಫಾಲೋವರ್‍ನ್ನು ಹೊಂದಿರೋ ಬಿಗ್ ಬಾಸ್ ಹುಡುಗಿ ಎಂಗೇಜ್‍ಮೆಂಟ್ ಬಳಿಕ ಮತ್ತೊಂದು ಸುದ್ದಿಮಾಡಿದ್ದಾರೆ.
ಕನ್ನಡದ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿಯ ಮನಸ್ಸನ್ನು ಬಿಗ್‍ಬಾಸ್‍ನಲ್ಲಿ ಕದ್ದಿರೋ ಮುದ್ದು ಹುಡುಗಿ ನಿವೇದಿತಾಗೆ ಮೈಸೂರು ದಸಾರದಲ್ಲಿ ಉಂಗುರ ತೊಡಿಸೋ ಮೂಲಕ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡಿದ ಈ ಜೋಡಿಯ ಮೇಲೆ ನೆಟ್ಟಿಗರು ಕಣ್ಣಿಟಿದ್ದಾರೆ. ಈ ಜೋಡಿ ಡಿಸಂಬರ್‍ನಲ್ಲಿ ತಮ್ಮ ನಿಶ್ಚಿತಾರ್ಥವನ್ನು ಮುಗಿಸಿದ್ದು ಇದೀಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮದ್ಯದಲ್ಲೇ ಡಿಗ್ರಿ ಮುಗಿಸಿರೋ ನಿವೇದಿತಾ ತಮ್ಮ ಸ್ಟಾರ್ ಪಟ್ಟವನ್ನು ಪಕ್ಕಕ್ಕಿಟ್ಟು ಕೆಲಸಕ್ಕೆ ಸೇರಿಕೊಂಡಿದ್ದಾರೆ.ಪ್ರತಿಷ್ಠಿತ ಕಂಪೆನಿಯಲ್ಲಿ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಕಾರ್ಯ ನಿರ್ವಹಿಸುತ್ತಿದ್ದಾರೆ.ಸದ್ಯಕ್ಕೆ ನಿವೇದಿತಾ ಗೌಡ ಏರ್ಪೋಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಸ್ವತ: ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.