ಕನ್ನಡ ಚಿತ್ರರಂಗದ ಡ್ಯಾನ್ಸ್ ಕಿಂಗ್ ಅನ್ನೋ ಪಟ್ಟವನ್ನು ಪಡೆದಿರೋ ನಟ ಅಂದ್ರೆ ಅದು ವಿನೋದ್ ರಾಜ್ .ಮಾಡಿದ್ದು ಕೆಲವೇ ಸಿನಿಮಾಳಾದ್ರೂ ತಾನು ಅಭಿನಯಿಸಿದ ಸಿನಿಮಾಗಳು ಮಾತ್ರ ಸೂಪರ್ ಹಿಟ್.. ಈಗಲೂ ವಿನೋದ್ ರಾಜ್ ಡ್ಯಾನ್ಸ್‍ಗೆ ಯುವಕರು ಕ್ರೇಜ್ ಆಗಿದ್ದಾರೆ .ಅವರ ಸ್ಟೈಲನ್ನೇ ಅದೆಷ್ಟೋ ಯುವಕರು ಇಂದಿಗೂ ಅಳವಡಿಸುತ್ತಿದ್ದಾರಂದ್ರೆ ವಿನೋದ್ ರಾಜ್ ಡ್ಯಾನ್ಸ್ ಅಷ್ಟರ ಮಟ್ಟಿಗೆ ಹೆಸರು ಮಾಡಿದೆ.
ಆದ್ರೆ ಅದ್ಯಾಕೋ ವಿನೋದ್ ರಾಜ್ ಸಿನಿಮಾ ಜೀವನ ಬಿಟ್ಟು ಅಮ್ಮನ ಜೊತೆ ಕೃಷಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದಾರೆ .ಇನ್ನು ವಿನೋದ್ ರಾಜ್ ಅಮ್ಮ ಖ್ಯಾತ ನಟಿ ಲೀಲಾವತಿಯವರ ಏಕೈಕ ಮಗ. ಆದ್ರೆ ಅದೇ ಮಗ ಇಂದಿಗೂ ಮದುವೆಯಾಗದೆ ಅಮ್ಮನ ಜೊತೆ ಹಾಯಾಗಿದ್ದಾರೆ. ಮದುವೆಯಾಕಾಗಿಲ್ಲ ಅನ್ನೋದರ ಬಗ್ಗೆ ಕೇಳಿದ್ರೆ ಅಚ್ಚರಿಯಾಗುತ್ತೆ. ಅಮ್ಮನಿಗೋಸ್ಕರ ಇಲ್ಲಿ ತನಕ ವಿನೋದ್‍ರಾಜ್ ಮದ್ವೆಯಾಗಿಲ್ವಂತೆ. ತನಗಿಂತ ಹೆಚ್ಚಾಗಿ ಅಮ್ಮನನ್ನು ಯಾರು ನೋಡಿಕೊಳ್ಳಲ್ಲ ಮಾತ್ರವಲ್ಲ ನಾನು ಕೊಡುವಷ್ಟು ಪ್ರೀತಿ ಹೆಂಡತಿಯಾಗಿ ಬರುವವಳು ನೀಡಲ್ಲ ಅನ್ನೋದು ವಿನೋದ್ ರಾಜ್ ಭಾವನೆ ಅದಕ್ಕಾಗಿ ಇಲ್ಲಿ ತನಕ ಮದುವೆಯಾಗದೆ . ತಮ್ಮ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.