ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಮೇಲೆ ಕೊಲೆಯತ್ನ ಸಂಚು ನಡೆದಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಡಿ.22 ರಂದು ಸಿಎಎ ಪರ ಸಮಾವೇಶ ಜರಗುತ್ತಿದ್ದು ಆ ಸಂದರ್ಭದಲ್ಲಿ 6 ಮಂದಿ ಎಸ್‍ಡಿಪಿಐ ಕಾರ್ಯಕರ್ತರು ಜನರ ಮೇಲೆ ಹಲ್ಲೆ ನಡೆಸಿದ್ದು 31 ವರ್ಷದ ವರಣ್ ಎಂಬಾತನಿಗೆ 6 ಬಾರಿ ಚಾಕು ಇರಿದು ಹತ್ಯೆ ನಡೆಸಿದ್ದು; ಇಡೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗುಲ್ಲೆಬ್ಬಿತ್ತು.. ಇನ್ನು ಆ 6 ಜನರ ಹುಡುಕಾಟದಲ್ಲಿದ್ದ ಪೊಲೀಸರು .ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟ ಆರೋಪಿಗಳು ಒಂದು ವೇಳೆ ಸಂಸದ ತೇಜಸ್ವಿ ಸೂರ್ಯ -ಸೂಲಿಬೆಲೆ ಸಿಎಎ ಪರ ಮಾತನಾಡಿದ್ದಲ್ಲಿ ಅವರನ್ನು ಮುಗಿಸುವ ಸ್ಕೆಚ್ ತಮ್ಮದಾಗಿತ್ತು ಅಂತ ಹೇಳಿಕೊಂಡಿದ್ದಾರೆ.