ಇಂದು ಎಲ್ಲುಬೆಲ್ಲ ಸವಿಯೋ ಹಬ್ಬ.. ಕೆಲ ಕಡೆಯಲ್ಲಿ ಇಂದೇ ಸಂಕ್ರಾತಿ ಹಬ್ಬವನ್ನು ಆಚರಿಸುತ್ತಿದ್ದು , ಮೈಸೂರಿನಲ್ಲೂ ವರ್ಷದ ಮೊದಲ ಹಬ್ಬ ಸಂಕ್ರಾತಿಯನ್ನು ಆಚರಣೆ ಮಾಡಲಾಗುತ್ತಿದೆ. ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪರಿಸರ ಸ್ನೇಹಿ ತಂಡದ ವತಿಯಿಂದ ಕಲ್ಯಾಣಗಿರಿಯ ತ್ರಿವೇಣಿ ವೃತ್ತದಲ್ಲಿ ಹಬ್ಬವನ್ನು ಆಚರಣೆ ಮಾಡಲಾಯಿತು.
ಹಿಂದೂ ಹಾಗೂ ಮುಸಲ್ಮಾನರ ಭಾವೈಕ್ಯತೆ ಬೆಸೆಯುವ ನಿಟ್ಟಿನಲ್ಲಿ ಎಳ್ಳು ಬೆಲ್ಲವನ್ನು ನೀಡಿ ಸಂಭ್ರಮಾಚರಣೆ ಮಾಡಲಾಯಿತು .ಇನ್ನು ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶ್ರೀ ಬಿ.ಆನಂದ್ .ಡಿ, ಲೋಹಿತ್ , ಎನ್.ಆರ್.ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾಸ್ವಾಮಿ, ನವೀನ್ ಶೆಟ್ಟಿ, ಜೀವನ್ ,ರಾಜು, ಸಾಗರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು