ಸ್ಯಾಂಡಲ್‍ವುಡ್‍ನಲ್ಲಿ ಲವ್ ಮಾಕ್ಟೇಲ್ ಸದ್ದಿಲ್ಲದೆ ಸಿನಿರಸಿಕರನ್ನು ಕಿಕ್ಕೇರಿಸುತ್ತಿದೆ. ಟ್ರೈಲರ್‍ನಲ್ಲೇ ಕುತೂಹಲ ಮೂಡಿಸಿದ ಚಿತ್ರತಂಡ ವೀಡಿಯೋ ಹಾಡನ್ನು ಲಾಂಚ್ ಮಾಡೋದರ ಮೂಲಕ ಸಂಗೀತ ಪ್ರೇಮಿಗಳ ಮನ ಗೆಲ್ಲುವಲ್ಲೂ ಯಶಸ್ವಿಯಾಗಿದ್ದಾರೆ . ಐ ಲವ್ ಯೂ ಚಿಣ್ಣ ಅನ್ನೋ ಹಾಡು ಇದೀಗ ಎಲ್ಲರ ಬಾಯಲ್ಲೂ ಗುನುಗುನಿಸುತ್ತಿದ್ದು ; ರಘು ದೀಕ್ಷಿತ್ ಮ್ಯೂಸಿಕ್ ಸಿನಿ ಪ್ರೀಯರನ್ನು ಸಂಗೀತ ಲೋಕದಲ್ಲಿ ತೇಲಾಡಿಸುವಂತೆ ಮಾಡಿದೆ .
ಇನ್ನು ಇದೇ ಮೊದಲ ಬಾರಿಗೆ ಮದರಂಗಿ ಕೃಷ್ಣ ಲವ್ ಮಾಕ್ಟೆಲ್ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಿದ್ದಾರೆ ಜೊತೆಗೆ ಸಿನಿಮಾದಲ್ಲಿ ರೊಮ್ಯಾಂಟಿಕ್ ನಾಯಕನಾಗಿಯೂ ಕೃಷ್ಣ ಕಾಣಿಸಿಕೊಂಡಿದ್ದಾರೆ . ಇದರ ಜೊತೆ ನಿರ್ಮಾಣದ ಹೊಣೆಯನ್ನೂ ಕೃಷ್ಣ ಹಾಗೂ ಮಿಲನ ನಾಗರಾಜ್ ಹೊತ್ತಿದ್ದಾರೆ . ಶುೃತಿ –ಅಭಯಂಕರ್ ಹಾಡಿರೋ ರಾಘವೇಂದ್ರ ಕಾಮತ್ ಸಾಹಿತ್ಯದ ಐ ಲವ್ ಯೂ ಚಿಣ್ಣ ಹಾಡಂತು ಮ್ಯೂಸಿಕ್ ಪ್ರೇಮಿಗಳನ್ನು ಮಾಂತ್ರಿಕ ಲೋಕದಲ್ಲಿ ತೇಲಾಡಿಸುತ್ತಿದೆ.