ದುನಿಯಾ ಸುರಿ ನಿರ್ದೇಶನದ ಪಾಪ್‍ಕಾನ್ ಮಂಕಿ ಟೈಗರ್ ಚಿತ್ರದ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ .. “ ದುನಿಯಾ ಸೂರಿ ಸಾರ್ ಬಗ್ಗೆ ಹೇಳಲು ಎರಡು ಮಾತಿಲ್ಲ .ಅವರೊಬ್ಬ ಅದ್ಬುತ ನಿರ್ದೆಶಕ. ನಾನು ಅವರ ನಿರ್ದೆಶನದ ಜಾಕಿ , ಅಣ್ಣಾಬಾಂಡ್ , ದೊಡ್ಮನೆ ಹುಡುಗ ಸಿನಿಮಾದಲ್ಲಿ ಅಭಿನಯಿಸಿದ್ದೇನೆ . ಮಾತ್ರವಲ್ಲ ಟಗರು ಕೂಡ ತುಂಬಾ ಅದ್ಬುತವಾಗಿ ಕಾಣಿಸಿಕೊಂಡಿದ್ದು , ಧನಂಜಯ್ ಅಭಿನಯ ಸೂಪರ್ ಹಿಟ್ ಆಗಿದ್ದು , ಇದೀಗ ಮತ್ತೆ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ . ಸಂಗೀತ ಅದ್ಬುತವಾಗಿ ಮೂಡಿಬಂದಿದೆ ಅನ್ನೋ ಮೂಲಕ ಇಡೀ ತಂಡಕ್ಕೆ ಅಪ್ಪು ಶುಭಾಶಯಕೋರಿದ್ದಾರೆ
ಸದಾ ರೋ ಸಿನಿಮಾಗಳನ್ನು ನಿರ್ದೇಶನ ಮಾಡೋದರ ಮೂಲಕ ಯಶಸ್ಸು ಕಂಡಿರೋ ಡೈರೆಕ್ಟರ್ ದುನಿಯಾ ಸೂರಿ ಮತ್ತೇ ಅಂಥಹದ್ದೇ ವಿಭಿನ್ನ ಸಿನಿಮಾವನ್ನು ಮಾಡೋದರ ಮೂಲಕ ಸೌಂಡ್ ಮಾಡುತ್ತಿದ್ದಾರೆ .ಮಾತ್ರವಲ್ಲ ಪಾಪ್‍ಕಾನ್ ಮಂಕಿ ಟೈಗರ್ ಅನ್ನೋ ಹೆಸರೇ ವಿಚಿತ್ರವಾಗಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ.