ಜೆ ಎನ್ ಯು ಕ್ಯಾಂಪಸ್ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆದಿದೆ. ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ , ಮೈಸೂರಿನ ಗಾಂಧೀ ವೃತ್ತದಲ್ಲಿ ಧ್ವನಿ ಮೊಳಗಿಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರ ಮೋಸಿನ್ ಖಾನ್ ಬಿಜೆಪಿ ಆಡಳಿತ £ಡೆಸಲು ಆರಂಭಿಸಿದಾಗಿನಿಂದಲೂ ಇಂಥಹ ಹಲ್ಲೆಗಳು ನಡೆಯುತ್ತಲೇ ಇದೆ. ಗೃಹ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ ಕೂಡಲೇ ಅಮಿತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ .
ಭಾನುವಾರ ಸಂಜೆ ಪ್ರತಿಷ್ಠಿತ ಸಂಸ್ಥೆ ಜೆ ಎನ್ ಯು ಕ್ಯಾಂಪಸ್‍ನಲ್ಲಿ ಮಾಸ್ಕ್‍ಧಾರಿಗಳಿಂದ ಹಲ್ಲೆ ನಡೆದಿದ್ದು , 17 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದು ಇದೀಗ ಇಡೀ ದೇಶವೇ ಇದರ ಬಗ್ಗೆ ಭಾರಿ ಚರ್ಚೆ ನಡೆಸುವುದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಭಾರಿ ವೈರಲಾಗಿದೆ.