ಬೆಂಗಳೂರು, ಡಿ 18: ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆ ನಿಶ್ಚಯವಾಗಿದ್ದು, ಬೆಂಗಳೂರಿನಲ್ಲಿಂದು ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ರಾಮುಲು ಪುತ್ರಿ ರಕ್ಷಿತಾ ಅವರ ವಿವಾಹವು ಹೈದರಾಬಾದ್ ನ ಉದ್ಯಮಿ ರವಿಕುಮಾರ್ ಅವರ ಪುತ್ರ ಲಲಿತ್ ಕುಮಾರ್ ಅವರೊಂದಿಗೆ ರೇಸ್‌ಕೋರ್ಸ್ ರಸ್ತೆಯ ತಾಜ್ ಹೋಟೆಲ್ ನಲ್ಲಿ ಬೆಳಿಗ್ಗೆ 11:30 ಕ್ಕೆ ನೆರವೇರಿದೆ.
ಸಿಎಂ ಯಡಿಯೂರಪ್ಪ, ಬಿಜೆಪಿಯ ಹಲವು ನಾಯಕರು, ನ್ನು ವಿಪಕ್ಷ ನಾಯಕರು,ರಾಮುಲು ಆತ್ಮೀಯ ಗೆಳೆಯ ಜನಾರ್ದನ ರೆಡ್ಡಿ ಮಾತ್ರವಲ್ಲದೆ ಪತ್ರಕರ್ತ ಮಿತ್ರರು ಸೇರಿದಂತೆ ಅನೇಕರು ಈ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶ್ರೀರಾಮುಲು ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ರಕ್ಷಿತಾ, ದೀಕ್ಷಿತಾ, ಅಂಕಿತಾ ಹಾಗೂ ಧನುಷ್ ಅವರ ಮಕ್ಕಳ ಹೆಸರು. ರಕ್ಷಿತಾ ಪ್ರಥಮ ಪುತ್ರಿಯಾಗಿದ್ದು, ಮಗಳ ನಿಶ್ಚಿತಾರ್ಥವನ್ನು ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಶ್ರೀರಾಮುಲು ಅವರು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಲಂಡನ್‍ನಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿ ಇಂದು ಬೆಂಗಳೂರಿನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದೆ.