ಇದೇ ಡಿಸೆಂಬರ್ 10ರಂದು ದೇಶದೆಲ್ಲೆಡೆ ತೆರೆಕಾಣುತ್ತಿರುವ ಮಲ್ಟಿಸ್ಟಾರ್ ಚಿತ್ರವೇ “ದಬಾಂಗ್-3”..ಈ ಚಿತ್ರದಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಲುಮಿಯಾ ಜೊತೆಗೆ ಸೊನಾಕ್ಷಿ ಸಿನ್ಹಾ ಹಾಗೂ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಟ ಪ್ರಭುದೇವ ಸಹ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣವನ್ನು ಪೂರ್ತಿಗೊಳಿಸಿ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿರುವ ಈ ಚಿತ್ರತಂಡ, ಸದ್ಯ ಪ್ರಮೋಶನ್ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಅದ್ರಲ್ಲೂ ಬಾಲಿವುಡ್ ನ ಖ್ಯಾಥ ರಿಯಾಲಿಟಿ ಶೋನಲ್ಲಿಯೂ ಚಿತ್ರದ ಪ್ರಮೋಶನ್ ಭರ್ಜರಿಯಾಗೇ ನಡೆದಿದೆ. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಕಿಚ್ಚ ಸುದೀಪ್, ಅರ್ಬಾಜ್ ಖಾನ್, ಪ್ರಭುದೇವ ಈ ಶೋ ನಲ್ಲಿ ಭಾಗವಹಿಸಿ, ತಮಾಷೆ ಮಾಡ್ತಾ ಕಾಲೆಳೆಯುತ್ತಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಕನ್ನಡಕ್ಕೆ ಡಬ್ ಆಗುತ್ತಿರುವ ಈ ಚಿತ್ರದ ಕನ್ನಡ ವರ್ಶನ್ ಡೈಲಾಗ್ಸ್ ನ್ನು ಗುರುದತ್ ಗಾಣಿಗ ಬರೆದಿದ್ದು, ಚಿತ್ರದ 6 ಹಾಡುಗಳಿಗೆ ನಿರ್ದೇಶಕ ಅನೂಪ್ ಭಂಡಾರಿ ಹೊಸದಾಗಿ ಸಾಹಿತ್ಯ ಬರೆದಿದ್ದಾರೆ. ನಿರ್ಮಾಪಕ ಜಾಕ್ ಮಂಜು ರವರು ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕನ್ನು ಪಡೆದುಕೊಂಡಿದ್ದಾರೆ.