ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾದವರು ಸ್ಯಾಂಡಲ್ ವುಡ್ ನ ಬಲುಬೇಡಿಕೆಯ ನಟರಾದ ಡಿ ಬಾಸ್ ಹಾಗೂ ರಾಕಿಗ್ ಸ್ಟಾರ್ ಯಶ್..ಸುಮಲತಾ ಪರ ಪ್ರಚಾರ ಮಾಡಿದ್ದ ಆ ದಿನಗಳಲ್ಲಿ ಸ್ಪರ್ಧಿಗಳಿಗಿಂತಲೂ ಹೆಚ್ಚಾಗಿ ಅಬ್ಬರಿಸಿ ಬೊಬ್ಬಿರಿದ ಈ ನಟರು ಜೋಡೆತ್ತುಗಳೆಂದೇ ಹೆಸರು ಪಡೆದುಕೊಂಡಿದ್ದರು.
ಸದ್ಯ ಮಂಡ್ಯ ಮಾಜಿ ಸಂಸದ ಶಿವರಾಮೇ ಗೌಡ ಜೋಡೆತ್ತುಗಳ ವಿರುದ್ಧ ಗುಡುಗಿದ್ದಾರೆ..ಕಬ್ಬು ಕಟಾವಾಗದೆ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಜೋಡೆತ್ತುಗಳು ಈಗ ರೈತರ ನೆರವಿಗೆ ಬರಲಿ ಎಂದು ವ್ಯಂಗ್ಯವಾಡಿದ್ದಾರೆ.
ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದು ಕುಮಾರಸ್ವಾಮಿಗೆ ಮತ ಹಾಕಿ ಎಂದು ಮತದಾರರಲ್ಲಿ ಕೇಳಿಕೊಂಡರೂ ಜೋಡೆತ್ತುಗಳ ಪ್ರಚಾರದಿಂದಾಗಿ ಸುಮಲತಾರವರ ಕೈ ಮೇಲಾಯ್ತು..ಅಂದು ಹಾಗೆ ಮಂಡ್ಯದುದ್ದಗಲಕ್ಕೂ ಪ್ರಚಾರ ಮಾಡಿದ್ದ ಜೋಡೆತ್ತುಗಳು ಈಗ ಬಂದು ರೈತರು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಕೊಡಿಸಲಿ ಎಂದು, ಸುಮಲತಾ ಪರ ಪ್ರಚಾರ ಮಾಡಿದ್ದ ನಟರಾದ ಯಶ್ ಹಾಗೂ ದರ್ಶನ್ ವಿರುದ್ಧ ಕಿಡಿ ಕಾರಿದ್ದಾರೆ.