ಹಾಸನ,ಸೆ.21; ಸರ್ಕಾರನ ನಡೆ, ರಾಜಕಾರಣಿಗಳ ಭವಿಷ್ಯ..ಹೀಗೆ ನಿತ್ಯವೂ ಒಂದಿಲ್ಲೊಂದು ಭವಿಷ್ಯವನ್ನು ನುಡಿಯುವ ಮೂಲಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವವರು ಕೋಡಿ ಮಠದ ಶ್ರೀಗಳು..ಮೊನ್ನೆ ಮೊನ್ನೆಯಷ್ಟೇ ಸರ್ಕಾರದ ಉಳೀವು ಇನ್ನು ನಾಲ್ಕು ತಿಂಗಳಷ್ಟೇ ಅಂದಿದ್ದ ಶ್ರೀ ಗಳು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.
ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ನಾಯಕರಾಗಿ ಬೆಳೆಯಲಿದ್ದಾರೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕುರಿತು ಈ ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಅವರಿಗೆ ದೆಹಲಿ ಕಡೆ ಗಮನ ನೀಡಲು ಹೇಳಿದ್ದೇನೆ ಎಂದು ಕೋಡಿಶ್ರೀ ಹೇಳಿದ್ದಾರೆ.
”ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ. ಈ ಹಿಂದೆ ಬಾದಾಮಿಗೆ ಬರುವಂತೆ ಬನ್ನಿ ಎಂದು ನಾನೇ ಕರೆದಿದ್ದೆ. ಆದರೆ ಅವರು ಇಲ್ಲಿಯೇ ನಿಂತು ಗೆಲ್ಲುತ್ತೇನೆ ಎಂದರು. ಕೊನೆಗೆ ಬಾದಾಮಿಗೆ ಬಂದರು” ಎಂದು ಕೋಡಿ ಶ್ರೀ ಹೇಳಿದರು.
”ಹಾಲುಮತ ಸಮಾಜದವರು ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ನೆಲೆಸಿದ್ದಾರೆ. ನಾನು ಹಿಂದೆಯೇ ಹೇಳಿದ್ದೆ, ಕಂಬಳಿ ಹಾಸೀತು, ಅಂಬಲಿ ಹಳಸೀತು ಸಿದ್ದು ಗದ್ದುಗೆ ಹಾಸೀತು ಎಂದು ಹಿಂದೆಯೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಅವರಿಗೆ ಶುಭಸೂಚನೆ ಇದೆ” ಎಂದು ಭವಿಷ್ಯ ನುಡಿದರು.
R