ಭಾರತದ ಪ್ರಧಾನಮಂತ್ರಿಗಳಾಗಿರುವ ನರೇಂದ್ರ ಮೋದಿಯವರು ಇಂದು 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಈ ವಿಶೇಷ ದಿನದಂದು ತಾಯಿಯ ಬಳಿ ತೆರಳಿದ್ದ ಮೋದಿಯವರು ತಾಯಿಯ ಕೈಅಡುಗೆಯನ್ನು ಮೆಚ್ಚುಗೆಯಿಂದ ಉಂಡು ಕೊಂಡಾಡಿದ್ದಾರೆ.. ತಾಯಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ..
ನೆಚ್ಚಿನ ರಾಜಕೀಯ ನಾಯಕ ಮೋದಿಯವರ ಹುಟ್ಟುಹಬ್ಬಕ್ಕೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸ್ಯಾಂಡಲ್ ವುಡ್‍ನ ತಾರೆಯರು ಮೋದಿ ಜನುಮದಿನಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ನವರಸ ನಾಯಕ ಜಗ್ಗೇಶ್, ಉಪೇಂದ್ರ, ಸಿಂಪಲ್ ಸುನಿ, ವಿನಯ್ ರಾಜ್ ಸೇರಿದಂತೆ ಅನೇಕರು ಮೋದಿಯವರಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ…