ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆಯಲ್ಲಿರುವ ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ನಾಗಶ್ರೀ ಮಾತೃ ವೃಂದ ತಂಡದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ತೆಂಕಬೆಳ್ಳೂರು ಧನುಪೂಜೆ ನಾಗಶ್ರೀ ವಿವೇಕ ಭವನದಲ್ಲಿ ನಡೆಯಿತು.
24 ವರ್ಷಗಳಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಸಭೆಯಲ್ಲಿ ಮೊದಲಿಗೆ ಲೆಕ್ಕಪತ್ರ ಮಂಡನೆ ನಡೆಯಿತು. ಬಳಿಕ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್‌ನ ಗೌರವ ಮಾರ್ಗದರ್ಶಕರಾಗಿ ಪೊಳಲಿ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಗೌರವ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅನಂತ್ ರಾಮ್ ಹೆರಳ್ ಆಯ್ಕೆಯಾದರು.
ಅಧ್ಯಕ್ಷರಾಗಿ ಹರೀಶ್ ಮುಡೈಕೋಡಿ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಕಮ್ಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ತಿರುಮಲೇಶ್ ಬೆಳ್ಳೂರು, ಜೊತೆ ಕಾರ್ಯದರ್ಶಿಯಾಗಿ ದುರ್ಗಾ ಪ್ರಸಾದ್ ಕಮ್ಮಾಜೆ, ಕೋಶಾಧಿಕಾರಿಯಾಗಿ ತಿರುಲೇಶ್ ಬೆಳ್ಳೂರು ಆಯ್ಕೆಯಾದರು.
ಇದೇ ವೇಳೆ ನಾಗಶ್ರೀ ಮಾತೃ ವೃಂದದ ಅಧ್ಯಕ್ಷರಾಗಿ ಸೌಮ್ಯ ಕಮ್ಮಾಜೆ, ಉಪಾಧ್ಯಕ್ಷರಾಗಿ ಲತಾ ಧನುಪೂಜೆ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಿತಾ ಕಮ್ಮಾಜೆ, ಜೊತೆ ಕಾರ್ಯದರ್ಶಿಯಾಗಿ ಭವ್ಯ ಬೆಳ್ಳೂರು ಹಾಗೂ ಕೋಶಾಧಿಕಾರಿಯಾಗಿ ದಿವ್ಯ ಬೆಳ್ಳೂರು ಆಯ್ಕೆಯಾದರು.





























































