ಬೆಂಗಳೂರು:ಹೋಟೆಲ್ ಮೌರ್ಯ ಸಭಾಂಗಣದಲ್ಲಿ ಲೋಕನಾಯಕ ಶತಾಯುಷಿ ಡಾ||ಭೀಮಣ್ಣ ಖಂಡ್ರೆ ರವರ ನುಡಿನಮನ ಕಾರ್ಯಕ್ರಮ ಫೆಬ್ರವರಿ 14ರಂದು ಅರಮನೆ ಮೈದಾನ ಗಾಯಿತ್ರಿ ವಿಹಾರ ಆಯೋಜಿಸಲಾಗಿದೆ.
ನುಡಿನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮತ್ತು ಕೆಪಿಸಿಸಿ ನಾಯಕರಾದ ಎಸ್.ಮನೋಹರ್, ಜಿ.ಕೃಷ್ಣಪ್ಪ, ಸೇರಿದಂತೆ ಅನೇಕರು ಭಾಗವಹಿಸಿದರು.
ಸಚಿವ ರಾಮಲಿಂಗಾರೆಡ್ಡಿರವರು ಮಾತನಾಡಿ ಶಾಸಕರಾಗಿ ಮತ್ತು ಸಚಿವರಾಗಿ ಭೀಮಣ್ಣ ಖಂಡ್ರೆರವರು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣವನ್ನು ಭೀಮಣ್ಣ ಖಂಡ್ರೆರವರು ಗುದ್ದಲಿಪೂಜೆ ನೇರವೆರಿಸಿದ್ದರು. ಭೀಮಣ್ಣ ಖಂಡ್ರೆರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣದಿಂದ ಬ್ರಿಟಿಷರು ಅವರ ಸಂಪತ್ತು ಆನ್ನು ಜಪ್ತಿ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನೆನಪಿಸಿದರು.
ಶತಾಯುಷಿ ಭೀಮಣ್ಣ ಖಂಡ್ರೆರವರಿಗೆ ಕರ್ನಾಟಕ ರತ್ನ ಕೊಡಮಾಡಬೇಕು ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗುವುದು ಎಂದವರು ತಿಳಿಸಿದರು.























































