ಮಂಗಳೂರು: ಈ ಬಾರಿ ರಥ ಸಪ್ತಮಿಯಂದು ಯಶೋಗಾಥೆ ಬರೆಯಲು ಯೋಗ ಪಟುಗಳು ತಯಾರಿ ನಡೆಸಿದ್ದಾರೆ. ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಸಲು ತಾಲೀಮು ನಡೆದಿದೆ.

ಶ್ರೀ ಪತಂಜಲಿ ಯೋಗ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ 25.01.2026 ಭಾನುವಾರ ಮುಂಜಾನೆ 5ರಿಂದ 7 ಗಂಟೆ ವರೆಗೆ. ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ 15 ಪುಣ್ಯ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
- ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ,
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು,
- ಉಳ್ಳಾಲ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನ ಮಂಜಿನಾಡಿ ,
- ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಮರೋಳಿ ಕಂಕನಾಡಿ,
- ಶ್ರೀ ವಿಶ್ವನಾಥ ದೇವಸ್ಥಾನ ಸುರತ್ಕಲ್ ಕೃಷ್ಣಾಪುರ ,
- ಪುತ್ತೂರು ತಾಲೂಕಿನ ವಿವೇಕಾನಂದ ಪದವಿ ಪೂರ್ವ ಕಾಲೇಜು, ನೆಹರುನಗರ,
- ಶ್ರೀ ಕಾರಿಂಜೇಶ್ವರ ದೇವಸ್ಥಾನ ಕಾರಿಂಜ ,
- ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ದೇವಸ್ಥಾನ ನಂದಾವರ ,
- ಬೆಳ್ತಂಗಡಿ ತಾಲೂಕಿನ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನ
- ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ,
- ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ,
- ಕಾಸರಗೋಡು ಜಿಲ್ಲೆಯ ಕಾಳಿಕಾ ಪರಮೇಶ್ವರಿ ದೇವಸ್ಥಾನ ಹೊಸಂಗಡಿ
- ಸುಳ್ಯ ತಾಲೂಕಿನ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಕೇರ್ಪಳ ,
- ಕಡಬ ಬಸವೇಶ್ವರ ದೇವಸ್ಥಾನ ಕಲ್ಕುಂದ
ಈ ದೇವಾಲಯಗಳಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗ ಬಂಧುಗಳು, ಸಾರ್ವಜನಿಕ ಬಂಧುಗಳು ಭಾಗವಹಿಸಬಹುದೆಂದು SPYSS ಪ್ರಕಟಣೆ ತಿಳಿಸಿದೆ.


























































