ಬೆಂಗಳೂರು: ಸರ್ಕಾರದ ದುರಾಡಳಿತದಿಂದ ಕಂದಾಯ ಇಲಾಖೆಯಲ್ಲಿ 10,867 ಹುದ್ದೆಗಳು ಖಾಲಿ ಇವೆ. ಇತ್ತ ನಾಡಿನ ಯುವಕರು ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದರೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಟೀಕಿಸಿದೆ.
ಕೆರೆ, ಸ್ಮಶಾನ ಭೂಮಿ ಕಬಳಿಸುವುದರಲ್ಲಿ ಆಸಕ್ತಿ ವಹಿಸುವ ಸಚಿವರು, ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಮಾಡದೆ ಉದ್ಯೋಗಾಕಾಂಕ್ಷಿಗಳ ಸರ್ಕಾರಿ ಕೆಲಸದ ಕನಸಿಗೆ ಮಣ್ಣೆರಚಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರದ “ಪೋತಿ” ಸಿದ್ಧವಾಗುತ್ತಿದೆಯೇ ಹೊರತು ಜನಸಾಮಾನ್ಯರ “ಪೋಡಿ” ಕೆಲಸವಾಗುತ್ತಿಲ್ಲ.! ಸಚಿವ ಕೃಷ್ಣಭೈರೇಗೌಡ ಅವರೇ, ನಿದ್ದೆಯಿಂದ ಎದ್ದು ಖಾಲಿ ಹುದ್ದೆಗಳ ಭರ್ತಿ ಮಾಡಿ, ಯುವಕರಿಗೆ ಕೆಲಸ ಕೊಡಿ ಹಾಗೇ ಅನ್ನದಾತರ ಸಂಕಷ್ಟ ಆಲಿಸಿ ಎಂದು ಸಚಿವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
























































