ಬೆಳಗಾವಿ: ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಮರ ಇತಿಹಾಸವನ್ನು ಸಾರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ) ಮತ್ತು ಸಮಾಧಿ ಬಳಿಯ ಕೆರೆಯಲ್ಲಿ ಅವರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ರಾಯಣ್ಣನವರ ಹೋರಾಟದ ಹಾದಿ ಮತ್ತು ತ್ಯಾಗದ ಕಥೆಗಳನ್ನು ಈ ಸ್ಮಾರಕವು ಮುಂದಿನ ಪೀಳಿಗೆಗೆ ಉಣಬಡಿಸಲಿದೆ. ನಮ್ಮ ನೆಲದ ವೀರನಿಗೆ ಸಲ್ಲಿಸಿದ ಈ ಗೌರವವು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ































































