ಮಂಗಳೂರು: ನಿಷ್ಠುರ ರಾಜಕಾರಣಿ ಎಂದು ಗುರುತಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ ರಾಜಿಯಾಗಲ್ಲ ಎಂಬ ಮಾತುಗಳು ಜನಜನಿತ. ಪ್ರಮುಖವಾಗಿ ರಸ್ತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಸಮೀಪದ ತೆಂಕಬೆಳ್ಳೂರು ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಗಮನಸೆಳೆದಿದೆ.

ಶಾಸಕರ 10 ಲಕ್ಷ ರೂ ಅನುದಾನದಲ್ಲಿ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಭಟ್ರಕೋಡಿ ಕಾಂಕ್ರಿಟೀಕೃತ ರಸ್ತೆಯನ್ನು ಅಭಿವೃದ್ದಿಪಡಿಸಲಾಗಿದೆ. ಈ ರಸ್ತೆಯನ್ನು ಭಾನುವಾರ ಉದ್ಘಾಟಿಸಲಾಯಿತು. ಊರ ಪುಟಾಣಿ ಮಕ್ಕಳು ಈ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿರುವುದು ವಿಶೇಷ. ಶಾಸಕ ರಾಜೇಶ್ ನಾಯ್ಕ್ ಅವರು ಆ ಊರಿನ ಮಕ್ಕಳ ಕೈಯ್ಯಲ್ಲಿ ಉದ್ಘಾಟನೆ ನೆರವೇರಿಸಿದ ವೈಖರಿಯು ನಾಗರಿಕರ ಮೆಚ್ಚಿಗೆಗೆ ಕಾರಣವಾಯಿತು.

ಈ ಸಂದರ್ಭದಲ್ಲಿ ಬಡಗಬೆಳ್ಳೂರು ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ಪೂಜಾರಿ ಅಜಿನಡ್ಕ, ಪಂಚಾಯತ್ ಸದಸ್ಯರಾದ ರಘುವೀರ್ ಗರ್ಗಲ್, ಬಂಟ್ವಾಳ ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತೆಂಕ ಬೆಳ್ಳೂರು ಬಿಜೆಪಿ ಸಂಚಾಲಕರಾದ ಮುರಳಿಧರ್ ಶೆಟ್ಟಿ, ವಾಮನ ಸಪಲ್ಯ ಹೆಬ್ಬಾರ ಬೆಟ್ಟು, ಪದ್ಮನಾಭ ಸಪಲ್ಯ, ತಿಮ್ಮಪ್ಪ ಬೆಳ್ಚಡ, ಅಶೋಕ್ ದೇವಾಡಿಗ, ನಾಗಶ್ರೀ ಸಂಘ ಅಧ್ಯಕ್ಷ ರಾಮದಾಸ್ ಕಮ್ಮಾಜೆ, ದಿವಾಕರ್ ಕಾಗುಡ್ಡೆ, ಬಿಜೆಪಿ ಕಾರ್ಯಕರ್ತರಾದ ತಿಮ್ಮಪ್ಪ ಕಮ್ಮಾಜೆ, ತಿರುಲೇಶ್ ಬೆಳ್ಳೂರು, ತಿರುಮಲೇಶ್ ಬೆಳ್ಳೂರು, ದಿವಾಕರ ನಾಯ್ಕ್ ಕಾಗುಡ್ಡೆ, ತಿಮ್ಮಪ್ಪ ಕುಲಾಲ್, ಹರೀಶ್ ಮುಡೈಕೋಡಿ, ಗಂಗಾಧರ ಕಾಗುಡ್ಡೆ ಸಹಿತ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.































































