ಬೆಂಗಳೂರು: ಶಾಸಕ ಬಸವರಾಜ ಹೊರಟ್ಟಿ ಅವರು 45 ವರ್ಷಗಳ ಕಾಲ ನಿರಂತರವಾಗಿ ವಿಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸುವ ಮೂಲಕ ವಿಶಿಷ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಅಭಿನಂಧಿಸಿ, ಅವರ ಸೇವೆಯನ್ನು ಕೊಂಡಾಡಿದ್ದಾರೆ.
‘ಕರ್ನಾಟಕವಷ್ಟೇ ಅಲ್ಲದೇ, ಇಡೀ ದೇಶದ ರಾಜಕೀಯ ಕ್ಷೇತ್ರದಲ್ಲಿನ ಅಪರೂಪದ ಸಾಧನೆ ನಿಮ್ಮದಾಗಿದೆ. 1980ರ ದಶಕದಿಂದಲೇ ಶಿಕ್ಷಕರ ಧ್ವನಿಯಾಗಿ, ಶಿಕ್ಷಣ ಕ್ಷೇತ್ರದ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ತಾವು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಸಂವೇದನಶೀಲ ಗುಣಗಳನ್ನು ಹೊಂದಿರುವ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು’ ಎಂದು ಖರ್ಗೆ ಬಣ್ಣಿಸಿದ್ದಾರೆ.
ಶಿಕ್ಷಕರ ಹಿತಾಸಕ್ತಿಗಾಗಿ ಹೋರಾಟ ನಡೆಸಿ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಹೊರಟ್ಟಿಯವರ ಪರಿಶ್ರಮ ಇತರ ಎಲ್ಲಾ ಕ್ಷೇತ್ರಗಳ ಪ್ರಗತಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅನುಕರಣೀಯ’ ಎಂದಿದ್ದಾರೆ.
ವಿಧಾನ ಪರಿಷತ್ ತಮ್ಮ ಸುಧೀರ್ಘ ಸೇವೆ ಲಿಮ್ಕಾ ಬುಕ್ ದಾಖಲೆಯಲ್ಲಿ ಸೇರಿಸಿರುವುದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ ಎಂದು ಭಾವಿಸುತ್ತೇನೆ. ತಮ್ಮ ಶ್ರಮದ ಬದುಕು, ಸಾರ್ಥಕ ಸಾಧನೆಗಳು ಈ ನಾಡಿನ ಯುವ ಜನರಿಗೆ ಸ್ಪೂರ್ತಿಯಾಗಲಿ ಎಂದು ಎಂದು ಆಶಿಸಿ ಖರ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಸಾಲುಗಳು ಗಮನಸೆಳೆದಿವೆ.
ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅವರು,
45 ವರ್ಷಗಳ ಕಾಲ ನಿರಂತರವಾಗಿ ವಿಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸುವ ಮೂಲಕ ವಿಶಿಷ್ಟ ದಾಖಲೆ ಮಾಡಿರುವ ಈ ಸಂದರ್ಭದಲ್ಲಿ ತಮಗೆ ನನ್ನ ಹಾರ್ದಿಕ ಶುಭಾಶಯಗಳು.
ಕರ್ನಾಟಕವಷ್ಟೇ ಅಲ್ಲದೇ, ಇಡೀ ದೇಶದ ರಾಜಕೀಯ ಕ್ಷೇತ್ರದಲ್ಲಿನ ಅಪರೂಪದ ಸಾಧನೆ ನಿಮ್ಮದಾಗಿದೆ. 1980ರ ದಶಕದಿಂದಲೇ ಶಿಕ್ಷಕರ ಧ್ವನಿಯಾಗಿ,…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 12, 2025

























































