ಬೆಂಗಳೂರು: ಕನ್ನಡ ಚಿತ್ರದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರವು ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ.
ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು, ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಚಿತ್ರದ ತಂಡ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿತು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ವೀರ್, ‘ದರ್ಶನ್ ಬಿಡುಗಡೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವು ಹಲವು ಬಾರಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಆದರೆ, ದುರದೃಷ್ಟವಶಾತ್ ಅವರು ಇಂದು ಕೂಡ ನಮ್ಮೊಂದಿಗೆ ಇಲ್ಲ. ಈ ವಿಳಂಬಕ್ಕೆ ಕ್ಷಮೆಯಾಚಿಸುತ್ತೇನೆ,” ಎಂದರು.
“ದರ್ಶನ್ ಇದ್ದರೆ ನನಗೆ ಆನೆಯ ಬಲ. ನನ್ನ ತಂದೆ ಮುತ್ಯು, ಕೋವಿಡ್ ಸವಾಲುಗಳಲ್ಲಿ ಅವರು ನನ್ನ ಹಿಂದೆ ನಿಂತಿದ್ದರು. ಅವರ ಅಭಿಮಾನಿಗಳು ಈ ಚಿತ್ರಕ್ಕೆ ಈಗ ದೊಡ್ಡ ಬೆಂಬಲವಾಗಿದ್ದಾರೆ” ಎಂದು ಪ್ರಕಾಶ್ ಭಾವುಕರಾಗಿ ಹೇಳಿದರು.
ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ರಚನಾ ರೈ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಇದ್ರೆ ನೇಮ್ದಿಯಾಗ್ ಇರ್ಬೇಕ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.





















































